ಉದಯವಾಹಿನಿ, ನವದೆಹಲಿ: ದೆಹಲಿ ಪ್ರೀಮಿಯರ್ ಲೀಗ್ ಕ್ರಿಕೆಟಿನಲ್ಲಿ ಡೆಲ್ಲಿ ಸೂಪರ್‌ಸ್ಟಾರ್ ತಂಡದ ದಿಗ್ವೇಶ್ ರಾಥಿ ಮತ್ತು ಡೆಲ್ಲಿ ಲಯನ್ಸ್ ತಂಡದ ನಾಯಕ ನಿತೀಶ್ ರಾಣಾ ಪರಸ್ಪರ ಜಗಳಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಸಿದೆ. 10ನೇ ಓವರ್ ಎಸೆಯುವಾಗ ನಿತೀಶ್ ರಾಣಾ ಕ್ರೀಸ್‌ನಲ್ಲಿ ಇದ್ದರು. ಈ ವೇಳೆ ರಾಥಿ ಬೌಲಿಂಗ್ ಮಾಡಲು ಓಡಿ ಬಂದಿದ್ದರೂ ಬಾಲ್ ಎಸೆಯಲಿಲ್ಲ. ಇದಕ್ಕೆ ಸಿಟ್ಟಾದ ರಾಣಾ ರಾಥಿ ಮತ್ತೊಮ್ಮೆ ಬಾಲ್ ಎಸೆಯಲು ಬಂದಾಗ ಕೈ ಎತ್ತಿ ತಡೆದು ಬೌಲಿಂಗ್ ನಿಲ್ಲಿಸಿದರು. ನಂತರ ಎಸೆತವನ್ನು ರಿವರ್ಸ್ ಸ್ವೀಪ್ ಮೂಲಕ ಸಿಕ್ಸ್‌ಗೆ ಅಟ್ಟಿದರು.
ರಾಣಾ ಅವರು ರಾಥಿ ಸ್ಟೈಲ್‌ನಲ್ಲಿ ನೋಟ್‌ಬುಕ್ ಸಂಭ್ರಮಾಚರಣೆ ಮಾಡಿ ಕಿಚಾಯಿಸಿದರು. ರಾಥಿ ಸಿಟ್ಟಾಗಿ ಏನೋ ಹೇಳಿದ್ದಾರೆ. ರಾಥಿ ಮಾತಿಗೆ ಕೋಪಗೋಂಡ ರಾಣಾ ಜಗಳ ಮಾಡುತ್ತಾ ರಾಥಿ ಹತ್ತಿರ ಬಂದರು. ಈ ಸಮಯದಲ್ಲಿ ಉಳಿದ ಆಟಗಾರರು ಮತ್ತು ಅಂಪೈರ್ ಮಧ್ಯಪ್ರವೇಶಿಸಿ ರಾಣಾ ಅವರನ್ನು ತಡೆದರು.
