ಉದಯವಾಹಿನಿ, ಮಾಸ್ಕೋ: ಅಮೆರಿಕ ಸುಂಕ ಸಮರದ ನಡುವೆಯೂ ಹೆಚ್ಚಿನ S-400 ವಾಯು ರಕ್ಷಣಾ ವ್ಯವಸ್ಥೆಗಳಿಗಾಗಿ (S-400 Air Defence Systems) ರಷ್ಯಾ, ಭಾರತ ಮಾತುಕತೆ ನಡೆಸುತ್ತಿವೆ ಎಂದು ವರದಿಯಾಗಿದೆ. ಇದು ಭಾರತ ಮತ್ತು ರಷ್ಯಾ (India – Russia) ನಡುವಿನ ಸಂಬಂಧ ಬಲಗೊಳ್ಳುತ್ತಿರುವುದಕ್ಕೆ ಉದಾಹರಣೆಯಾಗಿದೆ. S-400 ವಾಯು ರಕ್ಷಣಾ ವ್ಯವಸ್ಥೆಗಳ ಪೂರೈಕೆಯನ್ನು ಹೆಚ್ಚಿಸಲು ರಷ್ಯಾ ಮತ್ತು ಭಾರತ ಮಾತುಕತೆ ನಡೆಸುತ್ತಿವೆ. ಭಾರತ ಈಗಾಗಲೇ ಎಸ್‌-400 (ಸುದರ್ಶನ ಚಕ್ರ) ಹೊಂದಿದ್ದರೂ ಇದರ ಪೂರೈಕೆ ಇನ್ನಷ್ಟು ಹೆಚ್ಚಿಸಲು ಮಾತುಕತೆ ನಡೆಯುತ್ತಿದೆ ಎಂದು ರಷ್ಯಾ ಮಿಲಿಟರಿ ವಿಭಾಗದ ಹಿರಿಯ ಅಧಿಕಾರಿ ಡಿಮಿಟ್ರಿ ಶುಗಾಯೆವ್‌ ತಿಳಿಸಿದ್ದಾರೆ.
2018ರಲ್ಲಿ ಭಾರತ ಎಸ್‌-400 ವಾಯು ರಕ್ಷಣಾ ವ್ಯವಸ್ಥೆಗಳಿಗಾಗಿ ರಷ್ಯಾದೊಂದಿಗೆ 5.5 ಶತಕೋಟಿ ಡಾಲರ್‌ ಒಪ್ಪಂದಕ್ಕೆ ಸಹಿ ಹಾಕಿತ್ತು. ಚೀನಾದ (China) ಮಿಲಿಟರಿ ಶಕ್ತಿಯನ್ನು ಎದುರಿಸುವ ಉದ್ದೇಶದಿಂದ ಅಂದು ಭಾರತ, ರಷ್ಯಾ ಜೊತೆ ಈ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದ್ರೆ ಈವರೆಗಿನ ಪೂರೈಕೆಯಲ್ಲಿ ವಿಳಂಬವಾಗಿತ್ತು. ಇದೀಗ ಈ ಒಪ್ಪಂದದ ಅಡಿಯಲ್ಲಿ ಕೊನೆಯ 2 ಘಟಕಗಳು 2026 ಮತ್ತು 2027ರ ವೇಳೆ ಭಾರತಕ್ಕೆ ಲಭ್ಯವಾಗಲಿದೆ ಎಂದು ವರದಿಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!