ಉದಯವಾಹಿನಿ, ಟೋಕಿಯೊ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 41 ವರ್ಷದ ಪುತ್ರ ಎರಿಕ್ ಟ್ರಂಪ್, ಇತ್ತೀಚಿನ ಜಪಾನ್ ಪ್ರವಾಸದ ಸಂದರ್ಭದಲ್ಲಿ ಸುಮೋ ಕುಸ್ತಿ ಪ್ರಯತ್ನಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮೆಟಾಪ್ಲಾನೆಟ್ ಜೊತೆಗಿನ ಷೇರುದಾರರ ಸಭೆಯಲ್ಲಿ ಪಾಲ್ಗೊಳುವ ಸಲುವಾಗಿ ಎರಿಕ್ ಟ್ರಂಪ್ ಅವರು ಟೋಕಿಯೊಗೆ ಆಗಮಿಸಿದ್ರು. ಬ್ಯುಸಿನೆಸ್ ಮೀಟ್‍ಗಾಗಿ ಜಪಾನ್‍ಗೆ ತೆರಳಿದ ಅವರು ವಿಶಿಷ್ಟವಾದ ಜಪಾನೀಸ್ ಸಂಸ್ಕೃತಿಯ ಅನುಭವವನ್ನು ತಿಳಿಯುವುದಕ್ಕಾಗಿ ಸಮಯವನ್ನು ಮೀಸಲಿಟ್ಟರು. ಸುಮೋ ಶ್ರೇಷ್ಠರ ವಿರುದ್ಧ ಎಲಿಕ್ ಟ್ರಂಕ್ ಕಾಳಗಕ್ಕೆ ಮುಂದಾದ್ರು.
ವೈರಲ್ ಆಗಿರುವ ವಿಡಿಯೊದಲ್ಲಿ, ಆಕಾಶ-ನೀಲಿ ಶರ್ಟ್ ಮತ್ತು ಡೆನಿಮ್ ಶಾರ್ಟ್ಸ್ ಧರಿಸಿರುವ ಎರಿಕ್ ಟ್ರಂಪ್, ಕ್ರೀಡೆಯ ಅತ್ಯುನ್ನತ ಶ್ರೇಯಾಂಕಿತ ಕುಸ್ತಿಪಟುಗಳಲ್ಲಿ ಒಬ್ಬರಾದ ಯೊಕೊಜುನಾ ಅವರನ್ನು ತಳ್ಳುವುದನ್ನು ನೋಡಬಹುದು. ಅವರ ಎತ್ತರ ಮತ್ತು ಹಿಡಿತವು ಅವರಿಗೆ ಒಮ್ಮೆ ಮುನ್ನಡೆಯನ್ನು ನೀಡಿತು. ಆದರೆ ಚಾಂಪಿಯನ್ ತ್ವರಿತವಾಗಿ ಪ್ರತಿದಾಳಿ ನಡೆಸಿ, ಎರಿಕ್ ಟ್ರಂಪ್ ಅವರ ಸೊಂಟದ ಸುತ್ತಲೂ ತನ್ನ ತೋಳುಗಳನ್ನು ಸುತ್ತಿ, ಅವರನ್ನು ನೆಲದಿಂದ ಎತ್ತಿ ರಿಂಗ್‌ನಿಂದ ಹೊರಗೆ ಕರೆದೊಯ್ದರು. ಪ್ರತಿದಿನವೂ ಮಹಾನ್ ಯೊಕೊಜುನಾ ನಿಮ್ಮನ್ನು ಕುಸ್ತಿಯಾಡಲು ರಿಂಗ್‍ಗೆ ಕರೆಯುವುದಿಲ್ಲ. ಸುಮೋಗಳು ಬಹಳ ಅದ್ಭುತ ಪುರುಷರು ಎಂದು ಎರಿಕ್ ಟ್ರಂಪ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ. ಹಾಗೆಯೇ ಯೊಕೊಜುನಾ ಮತ್ತು ಇತರ ಐದು ಕುಸ್ತಿಪಟುಗಳ ಜೊತೆಗೆ ಅವರು ಫೋಟೋ ಕ್ಲಿಕ್ಕಸಿ ಹಂಚಿಕೊಂಡರು. ಇದೀಗ ಸುಮೋ ಜೊತೆ ಆಡಿರುವ ಕುಸ್ತಿಯ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.
ಸೋಲಿನಲ್ಲೂ ಎರಿಕ್ ಟ್ರಂಪ್ ಅವರ ಹಾಸ್ಯವನ್ನು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಶ್ಲಾಘಿಸಿದ್ದಾರೆ. ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು, ಇದು ಬಹಳ ಅದ್ಭುತವಾಗಿದೆ. ಸುಮೋ ನಿಮ್ಮನ್ನು ಹಿಡಿದೆತ್ತಿದಾಗ ತನಗೆ ನಗು ತಡೆಯಲಾಗಲಿಲ್ಲ ಎಂದಿದ್ದಾರೆ. ಈ ಕ್ರೀಡೆಗೆ ತುಂಬಾ ಗೌರವವಿದೆ ಎಂದು ಮತ್ತೊಬ್ಬ ಬಳಕೆದಾರರು ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ನೋಡಿ ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ನಗು ತರಿಸಿದ್ದು ಸುಳ್ಳಲ್ಲ. ಹಾಗೆಯೇ ಎರಿಕ್ ಟ್ರಂಪ್ ಅವರು ಸುಮೋ ಕುಸ್ತಿ ಪ್ರಯತ್ನಿಸಿದ್ದಕ್ಕೆ ಹಲವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
