ಉದಯವಾಹಿನಿ, ಬ್ಯಾಂಕಾಕ್: ಇತ್ತೀಚೆಗೆ ಭಾರತೀಯ ಪ್ರವಾಸಿಯೊಬ್ಬರು ಥೈಲ್ಯಾಂಡ್ ಪ್ರವಾಸದ ಸಮಯದಲ್ಲಿ ಮೊದಲ ಬಾರಿಗೆ ಹುಲಿಯೊಂದಿಗೆ ಪೋಸ್ ನೀಡಿದ ಹೃದಯಸ್ಪರ್ಶಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಈ ವಿಡಿಯೊ ನೆಟ್ಟಿಗರ ಗಮನ ಸೆಳೆದಿದ್ದು, ಭಾರಿ ವೈರಲ್ ಆಗಿದೆ. ಅನೇಕರು ಇದನ್ನು ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಅನುಭವ ಎಂದು ಹೇಳಿದ್ದಾರೆ.
ಥೈಲ್ಯಾಂಡ್ ತನ್ನ ವನ್ಯಜೀವಿ ಆಕರ್ಷಣೆಗಳಿಗೆ ಹೆಸರುವಾಸಿಯಾಗಿದೆ. ಪ್ರವಾಸಿಗರಿಗೆ ಹುಲಿಯನ್ನು ಬಹಳ ಹತ್ತಿರದಿಂದ ನೋಡುವುದು ಒಂದು ವಿಚಿತ್ರ ಅನುಭವವಾಗಿದೆ. ಇದೀಗ ವೈರಲ್ ಆಗಿರುವ ವಿಡಿಯೊದಲ್ಲಿ, ತರಬೇತುದಾರರ ಮೇಲ್ವಿಚಾರಣೆಯಲ್ಲಿ ಹುಲಿಯ ಕೆಳಗೆ ಎಚ್ಚರಿಕೆಯಿಂದ ಕುಳಿತಿರುವ ವ್ಯಕ್ತಿಯನ್ನು ವಿಡಿಯೊದಲ್ಲಿ ನೋಡಬಹುದು. ತರಬೇತುದಾರರು ಹುಲಿಗೆ ಹಾಲು ಕುಡಿಸುತ್ತಿರುವಾಗ ವ್ಯಕ್ತಿಯನ್ನು ಕೆಳಗೆ ಕುಳ್ಳಿರಿಸಲಾಗಿದೆ. ಈ ವೇಳೆ ಆತ ಉತ್ಸಾಹ ಮತ್ತು ಕೊಂಚ ಆತಂಕಗೊಂಡಂತೆ ಕಂಡುಬಂತು. ಹುಲಿಯನ್ನು ಶಾಂತಗೊಳಿಸುವುದಕ್ಕಾಗಿ ಬಹುಷಃ ತರುಬೇತುದಾರರು ಹಾಲು ಕುಡಿಸುತ್ತಿರಬಹುದು.
