ಉದಯವಾಹಿನಿ, ಲಕ್ನೋ: ʻದಂಡುಪಾಳ್ಯʼ ಸಿನಿಮಾವನ್ನ ನೀವು ನೋಡಿರಬಹುದು, ಈ ಸಿನಿಮಾದಲ್ಲಿ (Cinema) ಒಂಟಿ ಮನೆಗಳನ್ನ ಟಾರ್ಗೆಟ್‌ ಮಾಡುವ ಗ್ಯಾಂಗ್‌ ಮಹಿಳೆಯರನ್ನ ಅತ್ಯಾಚಾರಗೈದು ಭೀಕರವಾಗಿ ಕೊಲೆ ಮಾಡಿ ಎಸ್ಕೇಪ್‌ ಆಗ್ತಿತ್ತು. ಇದೀಗ ಅದಕ್ಕಿಂತಲೂ ಭಯಾನಕವಾದ ಗ್ಯಾಂಗ್‌ವೊಂದು ಉತ್ತರ ಪ್ರದೇಶದ ಮೀರತ್‌ನಲ್ಲಿ (UP’s Meerut) ಹುಟ್ಟಿಕೊಂಡಿದೆ.
ಹೌದು.. ಇದಕ್ಕೆ ʻನಗ್ನ ಗ್ಯಾಂಗ್‌ ಅಥವಾ ಬೆತ್ತಲೆ ಗ್ಯಾಂಗ್‌ʼ (Nude Gang) ಅಂತ ಕರೆಯಲಾಗ್ತಿದೆ. ಬೆತ್ತಲೆಯಾಗಿ ಬರುವ ಈ ಗ್ಯಾಂಗ್‌ ಸದಸ್ಯರು ಮಹಿಳೆಯರನ್ನ ಹೊತ್ತೊಯ್ಯುತ್ತಿದ್ದಾರೆ. ಮೀರತ್‌ನಲ್ಲಿ ಇತ್ತೀಚೆಗೆ ಇಂತಹ ನಾಲ್ಕು ಪ್ರಕರಣ ವರದಿಯಾಗಿದ್ದು, ದೌರಾಲಾ ಗ್ರಾಮದ ಮಹಿಳೆಯರಲ್ಲಿ ನಡುಕ ಹುಟ್ಟಿಸಿದೆ. ರಾತ್ರಿ ವೇಳೆ ಮಹಿಳೆಯರು ಮನೆಯಿಂದಾಚೆ ಬರೋದಕ್ಕೆ ಭಯ ಪಡುವಂತಾಗಿದೆ. ವಿಷಯದ ಗಂಭೀರತೆ ಪರಿಗಣಿಸಿರುವ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಗ್ಯಾಂಗ್‌ ಪತ್ತೆಹಚ್ಚಲು ಡ್ರೋನ್‌, ಸಿಸಿಟಿವಿಗಳನ್ನು (Drone And CCTV) ಕಣ್ಗಾವಲಿಗೆ ಇರಿಸಲಾಗಿದೆ.
ಈ ಕುರಿತು ದೌರಾಲಾ ಗ್ರಾಮದ ಮುಖ್ಯಸ್ಥ ರಾಜೇಂದ್ರ ಕುಮಾರ್ ಮಾತನಾಡಿ, ಕಳೆದ ಕೆಲ ದಿನಗಳಲ್ಲಿ ಮಹಿಳೆಯರನ್ನು ಹೊತ್ತೊಯ್ದ ನಾಲ್ಕು ಘಟನೆಗಳು ವರದಿಯಾಗಿವೆ. ಇದಕ್ಕೂ ಹಿಂದಿನ ಕೆಲ ಘಟನೆಗಳು ಜನರ ಭಯದಿಂದ ಬೆಳಕಿಗೆ ಬಂದಿಲ್ಲ. ಈ ಮೊದಲು ಗ್ರಾಮಸ್ಥರು ಇಲ್ಲಿನ ಘಟನೆಯನ್ನ ಗಂಭೀರವಾಗಿ ಪರಿಗಣಿಸಲಿಲ್ಲ. ಆದ್ರೆ ಈಗ ಪರಿಸ್ಥಿತಿ ಕೈಮೀರಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಈ ಗ್ಯಾಂಗ್‌ ಮಹಿಳೆಯರನ್ನೇ ಟಾರ್ಗೆಟ್‌ ಮಾಡಿ ಹೊತ್ತೊಯ್ಯುತ್ತಿದ್ದಾರೆ. ಪೊಲೀಸರು ಕೂಡಲೇ ಗ್ಯಾಂಗ್‌ಅನ್ನು ಪತ್ತೆಹಚ್ಚಬೇಕೆಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!