ಉದಯವಾಹಿನಿ,ನವದೆಹಲಿ:  ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯು, ದೇಶದಾದ್ಯಂತ ಮುಸ್ಲಿಂ ಮಹಿಳೆಯರನ್ನು ತಲುಪುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಯೋಜನೆಗಳ ಬಗ್ಗೆ ಹೇಳುತ್ತಿದೆ. ಇದೇ ವರ್ಷಾಂತ್ಯದಲ್ಲಿ ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ಹಾಗೂ 2024ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈಗಲೇ ಸಿದ್ಧತೆ ಆರಂಭಿಸಿರುವ ಬಿಜೆಪಿಯು ಸೂಫಿಗಳು, ದಾರ್ಶನಿಕರು ಮತ್ತು ಆಧ್ಯಾತ್ಮಿಕ ನಾಯಕರ ಮೂಲಕ ಅಲ್ಪಸಂಖ್ಯಾತರನ್ನು ತಲುಪುವ ತಂತ್ರ ರೂಪಿಸಿದೆ. ಇದಕ್ಕಾಗಿಯೇ ಧಾರ್ಮಿಕ ವಿಚಾರಗಳಲ್ಲಿ ತರಬೇತಿ ಪಡೆದ ಕಾರ್ಯಕರ್ತರ ತಂಡವನ್ನೂ ಪಕ್ಷವು ರೂಪಿಸಿದೆ. ‘ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾವು ದೇಶದಾದ್ಯಂತ ಪ್ರತಿ ಜಿಲ್ಲೆಯ 200 ಮುಸ್ಲಿಂ ಮಹಿಳೆಯರನ್ನು ತಲುಪಲು ಸಿದ್ಧತೆ ನಡೆಸಿದ್ದು, ತ್ರಿವಳಿ ತಲಾಖ್ ರದ್ದು, ಮಹಿಳಾಸ್ನೇಹಿ ಯೋಜನೆಗಳಾದ ಸ್ವಚ್ಛ ಭಾರತ್, ಉಜ್ವಲಾ ಮತ್ತು ‘ಬೇಟಿ ಬಚಾವೋ ಬೇಟಿ ಪಢಾವೋ’ ಯೋಜನೆಯ ಬಗ್ಗೆ ತಿಳಿಸಲಾಗುವುದು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!