ಉದಯವಾಹಿನಿ, ಬಾಳೆದಿಂಡು ಬಿಪಿ, ಶುಗರ್, ಗ್ಯಾಸ್ಟ್ರಿಕ್ ಹಾಗೂ ಕಿಡ್ನಿ ಸಮಸ್ಯೆ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗೆ ತುಂಬಾ ಪ್ರಯೋಜನಕಾರಿ. ಇದನ್ನು ಪೊರಿಯಲ್ (ಪಲ್ಯ), ಜ್ಯೂಸ್‌ ಸೇರಿದಂತೆ ನಾನಾ ಬಗೆಯಲ್ಲಿ ಸೇವಿಸುತ್ತಾರೆ. ಇಂತಹ ಆರೋಗ್ಯ ವರ್ಧಕ ಬಾಳೆದಿಂಡಿನಿಂದ ಪಲ್ಯ ಮಾಡುವುದು ಹೇಗೆ ಅಂತ ನೋಡೋಣ ಬನ್ನಿ.
ಬೇಕಾಗುವ ಪದಾರ್ಥಗಳು:
ಬಾಳೆ ದಿಂಡು – 1 ಅಡಿ ಉದ್ದ
ಹೆಸರು ಕಾಳು – ¾ ಬಟ್ಟಲು
ಸೀಳಿದ ಹಸಿ ಮೆಣಸಿನಕಾಯಿ – 2
ಸಕ್ಕರೆ – 2 ಟೀ ಚಮಚ
ಮಜ್ಜಿಗೆ – 3 ಬಟ್ಟಲು
ಉಪ್ಪು – ರುಚಿಗೆ ತಕ್ಕಷ್ಟು
ಒಗ್ಗರಣೆಗೆ: ಸಾಸಿವೆ ಮತ್ತು ಜೀರಿಗೆ – ತಲಾ 1 ಟೀ ಚಮಚ
ಕಡಲೆ ಬೇಳೆ ಮತ್ತು ಉದ್ದಿನ ಬೇಳೆ – ತಲಾ 1 ಟೀ ಚಮಚ
ಚೂರು ಮಾಡಿದ ಒಣ ಮೆಣಸಿನಕಾಯಿ – 1
ಇಂಗು – 2 ಟೀ ಚಮಚ
ಕರಿಬೇವು – ಸ್ವಲ್ಪ
ಮಾಡುವ ವಿಧಾನ:
1. ಹೆಸರು ಕಾಳನ್ನು ಒಂದು ಬಟ್ಟಲು ನೀರಿನಲ್ಲಿ ಒಂದು ಗಂಟೆ ಕಾಲ ನೆನೆಸಿ.
2. ಬಾಳೆಯ ದಿಂಡಲ್ಲಿ ಅನಗತ್ಯ ಭಾಗ ತೆಗೆದು, ಕತ್ತರಿಸಿ ಮತ್ತು ಮಜ್ಜಿಗೆಯಲ್ಲಿ ನೆನೆಸಿಡಿ.
3. ಬಾಣಲೆಯನ್ನು ಬಿಸಿ ಮಾಡಿ ಒಗ್ಗರಣೆಗಾಗಿ ಹಾಕಿ. ಸಾಸಿವೆ ಸಿಡಿದಾಗ, ಹಸಿ ಮೆಣಸಿನಕಾಯಿ, ನೆನೆಸಿದ ಹೆಸರು, ಕತ್ತರಿಸಿದ ಬಾಳೆ ದಿಂಡು, ಉಪ್ಪು, ಸಕ್ಕರೆ ಮತ್ತು ಒಂದು ಬಟ್ಟಲು ನೀರನ್ನು ಹಾಕಿ ಕಲಸಿ.
4. ಮುಚ್ಚಳವನ್ನು ಮುಚ್ಚಿ ಮತ್ತು ಕಡಿಮೆ ಉರಿಯಲ್ಲಿ ಕುದಿಸಿ. ಬಾಳೆ ದಿಂಡು ಚೆನ್ನಾಗಿ ಬೇಯಬೇಕು ಮತ್ತು ನೀರು ಇಂಗಬೇಕು.
ಈಗ ನಿಮ್ಮ ಮುಂದೆ ಬಾಳೆದಿಂಡಿ ಪೊರಿಯಲ್ ಸೇವಿಸಲು ಸಿದ್ಧ. ಇದು, ಅನ್ನದ ಜೊತೆ ಹಾಗೂ ತಿಂಡಿಯ ಜೊತೆ ಸೇವಿಸಲು ಉತ್ತಮ ರುಚಿ ಕೊಡುತ್ತೆ.

Leave a Reply

Your email address will not be published. Required fields are marked *

error: Content is protected !!