ಉದಯವಾಹಿನಿ, ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ನಿವಾಸದ ಮುಂದೆ ಕಾರಿಗೆ ಬೆಂಕಿ ಹೊತ್ತಿ ಉರಿದಿದೆ. ಇದರಿಂದ ಸಿಎಂ ನಿವಾಸದ ಮುಂಭಾಗ ಟ್ರಾಫಿಕ್ ಜಾಮ್ ಉಂಟಾಗಿದೆ. ಈ ಅವಘಡದಲ್ಲಿ ಕಾರಿನಲ್ಲಿದ್ದ ಚಾಲಕ ಹಾಗೂ ಮಾಲೀಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ಬಗ್ಗೆ ಮಾತಾಡಿರುವ ಅವರು, ಕಾರನ್ನು ಆಪ್‍ನಲ್ಲಿ ಬುಕ್ ಮಾಡಿಕೊಂಡಿದ್ದರು. ನಾನು ಚಾಲಕನಾಗಿ ಬಂದಿದ್ದೆ. ಸಿಎಂ ನಿವಾಸದ ಮುಂಭಾಗ ಬರುವಾಗ ಕಾರಿನ ಎಂಜಿನ್ ಭಾಗದಲ್ಲಿ ಹೊಗೆ ಕಾಣಿಸಿಕೊಂಡಿದೆ. ಆಗ ನಾನು ಇಳಿದೆ, ಈ ವೇಳೆ ತಕ್ಷಣ ಬೆಂಕಿ ಹೊತ್ತಿಕೊಂಡಿದೆ ಎಂದಿದ್ದಾರೆ.
2009ರ ಮಾಡೆಲ್‍ನ ಫಿಯೇಟ್ ಕಾರು ಇದಾಗಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

Leave a Reply

Your email address will not be published. Required fields are marked *

error: Content is protected !!