ಉದಯವಾಹಿನಿ, ಟೀಮ್ ಇಂಡಿಯಾದ ಸ್ಟಾರ್ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಒಂದಿಲ್ಲೊಂದು ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿದ್ದಾರೆ. ಈ ಸಲ ಕ್ರಿಕೆಟ್​ಗಾಗಿ ಅಲ್ಲ, ಬದಲಾಗಿ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಾರೆ. ಇದೀಗ ಹೊಸ ಗರ್ಲ್​ಫ್ರೆಂಡ್​ ಜೊತೆ ಸ್ಟಾರ್​ ಆಲ್​ರೌಂಡರ್ ಕಾಣಿಸಿಕೊಂಡಿದ್ದು ಡೇಟಿಂಗ್​ನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.

ಹಾರ್ದಿಕ್ ಪಾಂಡ್ಯ ಈಗಾಗಲೇ ಹೆಂಡತಿ ನತಾಶಾ ಸ್ಟಾಂಕೋವಿಕ್​ನಿಂದ ದೂರಾವಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದಾದ ಮೇಲೆ ಖ್ಯಾತ ಬ್ರಿಟಿಷ್ ಸಿಂಗರ್​ ಕಮ್ ನಟಿ ಜಾಸ್ಮಿನ್ ವಾಲಿಯಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಸದ್ಯ ಈ ಎಲ್ಲವೂ ಮುಗಿದ ಕಥೆಯಾದರೆ, ಇದೀಗ ಸ್ಟಾರ್ ಆಲ್​ರೌಂಡರ್​ ಪಾಂಡ್ಯ ಅವರ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹಾರ್ದಿಕ್ ಪಾಂಡ್ಯ ಅವರು ಮಾಡೆಲ್ ಕಮ್ ನಟಿಯಾಗಿರುವ ಮಹಿಕಾ ಶರ್ಮಾ ಜೊತೆ ಡೇಟಿಂಗ್​​ನಲ್ಲಿದ್ದಾರೆ ಎನ್ನಲಾಗಿದೆ. ಮಹಿಕಾ ಶರ್ಮಾ ಸೆಲ್ಫಿ ವಿಡಿಯೋವೊಂದರಲ್ಲಿ ಹಾರ್ದಿಕ್ ಪಾಂಡ್ಯ ಬ್ಲರ್​ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಇದು ಪಾಂಡ್ಯನೇ ಎನ್ನುವುದು ಕನ್​ಫರ್ಮ್ ಇಲ್ಲ. ಇದೇ ಎಲ್ಲ ಕಡೆ ವೈರಲ್ ಆಗಿದ್ದು ಮಹಿಕಾ ಶರ್ಮಾ ಮತ್ತು ಪಾಂಡ್ಯ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ.

Leave a Reply

Your email address will not be published. Required fields are marked *

error: Content is protected !!