ಉದಯವಾಹಿನಿ,ಟಿಪ್ಸ್: ಸುಡು ಬೇಸಿಗೆಯಲ್ಲಿ ಗಿಡಗಳು ಒಣಗಿ ಹೋಗುತ್ತೆ. ಹೀಗಾಗಿ ಬೇಸಿಗೆಯಲ್ಲಿ ಕೈತೋಟ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಂಡ್ರೆ ನಿಮ್ಮ ಮನೆಯಲ್ಲೇ ಚೆಂದದ ತೋಟ ನಿರ್ಮಿಸಬಹುದು. ಚೆಂದದ ಹೂವಿನ ಗಿಡಗಳನ್ನು, ತರೆವಾರಿ ಹಣ್ಣು ತರಕಾರಿಗಳ ಗಿಡಗಳನ್ನು ಬೆಳೆಸಿ ಮನೆಯಲ್ಲೊಂದು ಪುಟ್ಟ ಕೈತೋಟ ನಿರ್ಮಿಸುವ ಹವ್ಯಾಸ ಬಹಳಷ್ಟು ಮಂದಿಗಿರುತ್ತದೆ. ಆದರೆ ಆಯಾ ಋತುವಿಗೆ ಅನುಗುಣವಾದ ಗಿಡಗಳನ್ನು ಬೆಳೆಸಿ, ಅವುಗಳನ್ನು ರಕ್ಷಿಸುವ ಕೆಲಸ ಸವಾಲಿನದ್ದು. ಅದರಲ್ಲೂ ಮುಖ್ಯವಾಗಿ ಬೇಸಿಗೆಯಲ್ಲಿ ಕೈತೋಟ ನಿರ್ವಹಣೆ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.
ಈ ಕುರಿತು ಕೆಲವು ಟಿಪ್ಸ್ ಕೆಳಗಿನಂತಿವೆ:-
1. ಸೂಕ್ತ ಗಿಡಗಳನ್ನು ಆರಿಸಿಕೊಳ್ಳಿ-
ಕೈತೋಟದಲ್ಲಿ ಸುಂದರ ಹೂವಿನ ಗಿಡಗಳಿದ್ದರೆ, ಮನೆಗೊಂದು ಸೊಬಗು. ಭಾರತದಲ್ಲಿ ಬೇಸಿಗೆ ಕಾಲದಲ್ಲಿ , ದಾಸವಾಳ, ಬೋಗನ್‍ವಿಲ್ಲಾ, ಕರವೀರ, ಗುಲಾಬಿ ಮತ್ತು ಸೂರ್ಯಕಾಂತಿ ಗಿಡಗಳನ್ನು ಬೆಳೆಯುವ ಮೂಲಕ, ನಿಮ್ಮ ಕೈತೋಟವನ್ನು ವರ್ಣಮಯವಾಗಿಸಬಹುದು.
2. ಆಸನದ ವ್ಯವಸ್ಥೆ-
ಸುಂದರವಾದ ಕೈತೋಟ ಇದ್ದ ಮೇಲೆ, ಅಲ್ಲಿ ಸಂತಸದ ಕ್ಷಣಗಳನ್ನು ಕಳೆಯದೇ ಇರಲು ಸಾಧ್ಯವೇ. ಹಾಗೆ ಮಾಡಬೇಕು ಎಂದಲ್ಲಿ, ಕೈತೋಟದಲ್ಲಿ ನೆರಳಿರುವ ಜಾಗವನ್ನು ಆರಿಸಿಕೊಂಡು ಮರದ ಬೇಸಿಗೆ ಉದ್ಯಾನ ಪೀಠೋಪಕರಣಗಳನ್ನು ಅಲಂಕರಿಸಿ. ಸುತ್ತಲೂ ಹೂವಿನ ಗಿಡಗಳನ್ನು ನೆಟ್ಟು, ಆ ಜಾಗವನ್ನು ಇನ್ನಷ್ಟು ಸುಂದರಗೊಳಿಸಿ.
3. ಚಿಕ್ಕ ಕೊಳ-
ಹಕ್ಕಿಗಳು ಬಂದು ನೀರಾಟವಾಡಲು ಸ್ಥಳ ಅಥವಾ ಚಿಕ್ಕ ಕೊಳವನ್ನು ನಿರ್ಮಿಸಿ. ಅದು ಹಕ್ಕಿಗಳನ್ನು ಆಕರ್ಷಿಸುತ್ತದೆ. ನೀವು ಅದನ್ನು ಸ್ವತಃ ನಿರ್ಮಾಣ ಮಾಡಿಸಬಹುದು ಅಥವಾ ಮಾರುಕಟ್ಟೆಯಿಂದ ರೆಡಿಮೆಡ್ ಆಗಿ ಸಿಗುವಂತದ್ದನ್ನೂ ಖರೀದಿಸಿ ತರಬಹುದು.
4. ತೂಗು ಬುಟ್ಟಿಗಳು-
ನಿಮ್ಮ ಕೈತೋಟದಲ್ಲಿ ಮರವಿದ್ದರೆ, ಅದರ ಕೊಂಬೆಗೆ ಹೂ ಬೀಡುವ ಗಿಡಗಳಿರುವ ಕುಂಡಗಳನ್ನು ನೇತು ಹಾಕಿ. ಅವುಗಳಿಗೆ ದೀಪ ಮತ್ತು ಬಲ್ಬ್‌ಗಳ ತಂತಿಗಳನ್ನು ನೇತು ಹಾಕಿದರೆ, ಕೈತೋಟದ ಸೌಂದರ್ಯ ಇನ್ನಷ್ಟು ಇಮ್ಮಡಿಸುತ್ತದೆ.
