ಉದಯವಾಹಿನಿ, ಸಿಯೋಲ್: ದಕ್ಷಿಣ ಕೊರಿಯಾ (South Korea) ದೇಶದಲ್ಲಿ ಮಾತೃತ್ವ ಬೆಂಬಲ ವ್ಯವಸ್ಥೆಯು ವ್ಯಾಪಕ ಪ್ರಶಂಸೆಯನ್ನು ಗಳಿಸುತ್ತಿದೆ. ಗರ್ಭಿಣಿಯಾದರೆ ಇಲ್ಲಿನ ಸರ್ಕಾರ ಧನ ಸಹಾಯ ಒದಗಿಸುತ್ತದೆ. ಈ ದೇಶದಲ್ಲಿ ತನ್ನ ಮಗುವಿಗೆ ಜನ್ಮ ನೀಡಿದ್ದಕ್ಕಾಗಿ ಭಾರತೀಯ ಮಹಿಳೆಯೊಬ್ಬರು ಸರ್ಕಾರದಿಂದ 1.26 ಲಕ್ಷ ರೂ.ಗಳನ್ನು ಪಡೆದಿದ್ದಾರೆ. ಈ ಬಗ್ಗೆ ವಿಡಿಯೊವನ್ನು ಇನ್ಸ್ಟಾಗ್ರಾಂ (Instagram) ನಲ್ಲಿ ಹಂಚಿಕೊಂಡಿದ್ದು, ಭಾರಿ ವೈರಲ್ (Viral Video) ಆಗಿದೆ.
ವಿಡಿಯೊದಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬರು ದಕ್ಷಿಣ ಕೊರಿಯಾದ ವ್ಯಕ್ತಿಯನ್ನು ಮದುವೆಯಾಗಿರುವುದನ್ನು ತೋರಿಸಲಾಗಿದೆ. ಆ ಮಹಿಳೆ ಕೊರಿಯಾದಲ್ಲಿ ಗರ್ಭಿಣಿಯಾಗಿದ್ದಕ್ಕಾಗಿ ತನಗೆ ಹಣ ಸಿಕ್ಕಿತು ಎಂಬ ಶೀರ್ಷಿಕೆಯೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ. ಹಾಗೆಯೇ ದಕ್ಷಿಣ ಕೊರಿಯಾದ ಅಧಿಕಾರಿಗಳಿಂದ ಪಡೆದ ವಿವಿಧ ಆರ್ಥಿಕ ಸಹಾಯಗಳನ್ನು ವಿವರಿಸಿದರು.
ಭಾರತೀಯ ಮೂಲದ ಮಹಿಳೆಯು ಗರ್ಭಿಣಿ ಎಂದು ದೃಢಪಟ್ಟ ತಕ್ಷಣ ಕೊರಿಯನ್ ಸರ್ಕಾರವು ತಪಾಸಣೆ ಮತ್ತು ಔಷಧಿಗಳು ಸೇರಿದಂತೆ ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ಭರಿಸಲು ಸುಮಾರು 63,100 ರೂ.ಗಳನ್ನು ಹಸ್ತಾಂತರಿಸಿದೆ ಎಂದು ಬಹಿರಂಗಪಡಿಸಿದರು. ಗರ್ಭಿಣಿಯರಿಗೆ ಸಾರ್ವಜನಿಕ ಸಾರಿಗೆ ವೆಚ್ಚಕ್ಕಾಗಿ 44,030 ರೂ.ಗಳನ್ನು ಸಹ ನೀಡಲಾಗಿದೆ.
