ಉದಯವಾಹಿನಿ, ಲಾಹೋರ್: ಕಳೆದ ಕೆಲವು ದಿನಗಳಿಂದ ಭಾರತದ ಹೆಚ್ಚಿನ ಭಾಗಗಳು ಮತ್ತು ನೆರೆಯ ರಾಷ್ಟ್ರ ಪಾಕಿಸ್ತಾನ (Pakistan) ದಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಉಂಟಾಗಿದೆ. ಪರಿಣಾಮ ರೈತರು ಬೆಳೆದ ಬೆಳೆಗಳು, ಭೂಮಿ, ಹೆದ್ದಾರಿಗಳು ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ವ್ಯಾಪಕ ಹಾನಿಯಾಗಿದೆ. ನೀರಿನ ಮಟ್ಟ ಹೆಚ್ಚುತ್ತಿರುವ ಫೋಟೋಗಳು ಮತ್ತು ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗುತ್ತಿದ್ದಂತೆ, ಮಾನವ ಜೀವಗಳ ಬಗ್ಗೆ ಕಳವಳಗಳು ಹೆಚ್ಚಿವೆ.ಈ ಅವ್ಯವಸ್ಥೆಯ ನಡುವೆಯೂ, ಕೆಲವರಿಗೆ ಪ್ರವಾಹ ಪೀಡಿತ ಪ್ರದೇಶವನ್ನು ಸಹ ವ್ಯಾಪಾರ ಅವಕಾಶವನ್ನಾಗಿ ಪರಿವರ್ತಿಸುವುದು ಹೇಗೆ ಎಂಬುದು ತಿಳಿದಿದೆ. ಹೌದು, ಮನುಷ್ಯರು ವರ್ತಿಸುವ ರೀತಿಯೇ ವಿಚಿತ್ರ. ಮನುಷ್ಯ ಎಷ್ಟೇ ಕಾರ್ಯನಿರತರಂತೆ ನಟಿಸಿದರೂ, ಯಾವಾಗಲೂ ಅಸಾಮಾನ್ಯವಾದವುಗಳಿಗೆ ಆಕರ್ಷಿತರಾಗುತ್ತಾರೆ. ಉದಾಹರಣೆಗೆ ಜೆಸಿಬಿ ಕೆಲಸ ಮಾಡುವುದನ್ನು ನೋಡುತ್ತಾ ಗಂಟೆಗಟ್ಟಲೆ ಕಳೆಯುವುದು, ಬೇರೆಯವರ ಜಗಳಗಳನ್ನು ನಿಂತು ನೋಡುತ್ತಾ ಆನಂದಿಸುವುದು, ಅಷ್ಟೇ ಅಲ್ಲ ಪ್ರವಾಹಗಳನ್ನು ಸಹ ಇದೇ ರೀತಿ ಕುತೂಹಲಕಾರಿಯಾಗಿ ನೋಡುತ್ತಾರೆ.
ಈ ಕುತೂಹಲಕಾರಿ ಆಕರ್ಷಣೆಯ ಲಾಭವನ್ನು ಪಡೆದುಕೊಂಡು, ಜೋಳದ ಮಾರಾಟಗಾರನೊಬ್ಬ ಇತ್ತೀಚೆಗೆ ಪ್ರವಾಹ ಪೀಡಿತ ಪ್ರದೇಶದ ಬಳಿ ಜೋಳದ ಅಂಗಡಿಯನ್ನು ಸ್ಥಾಪಿಸಿದರು. ಆಶ್ಚರ್ಯಕರವಾಗಿ, ಅವರಿಗೆ ಅದು ಭಾರಿ ಲಾಭ ತಂದಿತು. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ, ಮಾರಾಟಗಾರನು ಸೈಕಲ್‌ನಲ್ಲಿ ಜೋಡಿಸಲಾದ ಸಣ್ಣ ಸೆಟಪ್‌ನಲ್ಲಿ ಜೋಳವನ್ನು ತಯಾರಿಸುತ್ತಿರುವುದನ್ನು ಕಾಣಬಹುದು. ಸ್ಥಳದಲ್ಲಿದ್ದವರು ಪ್ರವಾಹ ಪರಿಸ್ಥಿತಿಯನ್ನು ವೀಕ್ಷಿಸುತ್ತಾ, ತಿಂಡಿಯನ್ನು ಆಸ್ವಾದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!