ಉದಯವಾಹಿನಿ, ಕೇರಳ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಚಿನ್ನಾಭರಣ ಕಳ್ಳತನವಾಗಿರುವ ಘಟನೆ ತಿರುವನಂತಪುರಂ ನಡೆದಿದೆ. ಇಲ್ಲಿನ ದ್ವಾರಪಾಲಕ ವಿಗ್ರಹಕ್ಕೆ ಹಾಕಿದ್ದ 42.8 ಕೆಜಿ ತೂಕದ ಕವಚದ 4.5 (4.45 kg of gold goes missing) ಕೆಜಿ ಚಿನ್ನ ಕಾಣೆಯಾಗಿದೆ. ದೇವಸ್ಥಾನದ ಗರ್ಭಗುಡಿಯ ಚಿನ್ನದ ಲೇಪನ ಕಾಮಗಾರಿಯ ವೇಳೆ ಈ ಘಟನೆ ಬೆಳಕಿಗೆ ಬಂದಿದ್ದು, ಸುಮಾರು 4.45 ಕೆಜಿ ಚಿನ್ನ ನಾಪತ್ತೆಯಾಗಿದೆ ಎನ್ನಲಾಗಿದೆ. ಸದ್ಯ ಈ ಪ್ರಕರಣಕ್ಕೆ ಕೇರಳ ಹೈಕೋರ್ಟ್ ಎಂಟ್ರಿಯಾಗಿದ್ದು, ನ್ಯಾಯಾಂಗ ತನಿಖೆಗೆ ಆದೇಶಿಸಿದೆ.
ಹೈಕೋರ್ಟ್‌ ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ವಿ ಮತ್ತು ಕೆ.ವಿ. ಜಯಕುಮಾರ್ ಅವರ ವಿಭಾಗೀಯ ಪೀಠವು ತುರ್ತು ಮತ್ತು ಸಮಗ್ರ ತನಿಖೆ ನಡೆಸುವಂತೆ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿದ್ದು, ಈ ಪ್ರಕರಣ ಸಂಪೂರ್ಣ ವಿವರ ಇಲ್ಲಿದೆ. ಮದ್ಯದ ದೊರೆ ವಿಜಯ್​ ಮಲ್ಯ ಜನವರಿ 2011ರಲ್ಲಿ 32 ಕೆಜಿ ಚಿನ್ನ ಮತ್ತು 1900 ಕೆಜಿ ತಾಮ್ರ ಬಳಸಿ, ದೇಗುಲದ ಮುಂಭಾಗ ಚಿನ್ನದ ಹಾಳೆಗಳ ಮೇಲ್ಛಾವಣಿ ನಿರ್ಮಿಸಿಕೊಟ್ಟರು. ಅದಕ್ಕೆ ಆಗ್ಗೆ ತಗುಲಿದ ವೆಚ್ಚ 18 ಕೋಟಿ ರೂಪಾಯಿ ವೆಚ್ಚವಾಗಿತ್ತು. ಆದರೆ ವರ್ಷ ಕಳೆದಂತೆ ದೇವಸ್ಥಾನದ ಗರ್ಭಗುಡಿಯ ಚಿನ್ನಲೇಪಿತ ಮಾಳಿಗೆ ಸೋರಲು ಶುರುವಾಗಿತ್ತು. ಪ್ರವೇಶ ದ್ವಾರದ ಎಡಭಾಗದಲ್ಲಿರುವ ಗರ್ಭಗುಡಿಯ ಹೊರ ಗೋಡೆಯ ಮೂಲಕ ನೀರು ಹೊರಬರುತ್ತಿತ್ತು. ಈ ವೇಳೆ ಇದನ್ನ ಸರಿಪಡಿಸಲು ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ) ನಿರ್ಧರಿಸಿ, ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲು ಮುಂದಾಗಿತ್ತು.

ದುರಸ್ತಿ ಕಾರ್ಯಕ್ಕಾಗಿ, ದೇವಸ್ಥಾನದ ಖಜಾನೆಯಲ್ಲಿದ್ದ ಸುಮಾರು 42 ಕೆಜಿ ತೂಕದ ಚಿನ್ನದ ತಟ್ಟೆಗಳನ್ನು ಹೊರತೆಗೆದು, ಅದನ್ನು ಶುದ್ಧೀಕರಿಸಿ, ಹೊಸದಾಗಿ ಹಾಳೆಗಳನ್ನು ಮಾಡಿ ಗರ್ಭಗುಡಿಯ ಶಿಖರಕ್ಕೆ ಅಳವಡಿಸಬೇಕಾಗಿತ್ತು. ಆದರೆ ಮರು ನವೀರಕರಣ ಕೆಲಸ ಕಾರ್ಯಗಳು ಮುಗಿದು ಚಿನ್ನದ ಹಾಳೆಗಳನ್ನು ಹಿಂದಿರುಗಿಸುವಾಗ ಸುಮಾರು 4.5 ಕೆಜಿ ಚಿನ್ನ ಕಡಿಮೆ ಇರುವುದು ತಿಳಿದು ಬಂದಿದ್ದು, ದೇವಾಲಯದ ಆಡಳಿತ ಮಂಡಳಿಯ ಅನುಮಾನ ಹುಟ್ಟಿಸುವ ವಾತಾವರಣ ನಿರ್ಮಾಣವಾಗಿದೆ.

Leave a Reply

Your email address will not be published. Required fields are marked *

error: Content is protected !!