ಉದಯವಾಹಿನಿ, ಅಂದ ಚೆಂದ ಫಿಟ್ನೆಸ್ ಎಲ್ಲವೂ ಇದ್ರೂ ಸಮಂತಾಗೆ ಇತ್ತೀಚೆಗೆ ಸಿನಿಮಾ ಆಫರ್ ಕಡಿಮೆಯಾಗಿದೆ. ವೆಬ್‍ಸಿರೀಸ್‍ಗಳು ಬಿಟ್ರೆ ಸಮಂತಾಗೆಂದೇ ಹುಡುಕಿಕೊಂಡು ಬರುವ ಅವಕಾಶಗಳು ಕಮ್ಮಿಯಾಗಿರೋದು ಎಲ್ಲರ ಗಮನಕ್ಕೂ ಬಂದಿದೆ. ಅವಕಾಶಗಳು ಬರುತ್ತಿಲ್ಲವೋ ಅಥವಾ ಸಮಂತಾ ಬೇಡ ಎನ್ನುತ್ತಿದ್ದಾರೋ ಅನ್ನೋ ಅನುಮಾನ ಎಲ್ಲರಲ್ಲಿತ್ತು. ಈಗ ನಟಿಯೊಬ್ಬರು ಸಮಂತಾ ಹೆಸರು ಹೇಳದೇ ಆಡಿದ ಮಾತು ಟಾಲಿವುಡ್ ಇಂಡಸ್ಟ್ರಿಯನ್ನು ಶೇಕ್ ಮಾಡಿದೆ.
ಸಮಂತಾಳ ಸಿನಿಮಾ ಅವಕಾಶವನ್ನು ನಾಗಾರ್ಜುನ ಕುಟುಂಬ ತಪ್ಪಿಸುತ್ತಿದೆಯಂತೆ. ಸ್ಟಾರ್ ನಟಿಯಾಗಿದ್ದಾಗ ನಾಗಚೈತನ್ಯ ಕೈ ಹಿಡಿದ ಸಮಂತಾ, ಸಂಸಾರದಲ್ಲಿ ಬಿರುಕುಂಟಾಗಿ ಪರಸ್ಪರ ವಿಚ್ಛೇದನ ಪಡೆದುಕೊಂಡಿದ್ದರು. ಇದೀಗ ನಾಗಚೈತನ್ಯ ಇನ್ನೊಂದು ಮದುವೆಯನ್ನೂ ಆಗಿದ್ದಾರೆ. ಆದರೆ ಸಮಂತಾಗೆ ಬರುವ ಸಿನಿಮಾ ಆಫರ್‌ಗಳನ್ನ ಟಾಲಿವುಡ್ ಪ್ರತಿಷ್ಠಿತ ಸಿನಿಮಾ ಕುಟುಂಬ ಸಮಂತಾ ಮಾಜಿ ಮಾವ ನಾಗಾರ್ಜುನ ತಪ್ಪಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಟಿ ಲಕ್ಷ್ಮೀ ಮಂಚು ಅವರು ಕುಟುಂಬದ ಹೆಸರು ಹಾಗೂ ನಟಿಯ ಹೆಸರು ಹೇಳದೆಯೇ ಈ ವಿಚಾರವನ್ನ ಮಾತನಾಡಿದ್ದಾರೆ.
