ಉದಯವಾಹಿನಿ,ನವದೆಹಲಿ: ಬಿಗ್ ತ್ರೀಗಳಾದ ಭಾರತ-ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಟೆಸ್ಟ್ ನ್ನು ಎಡೆಬಿಡದೆ ಆಡುತ್ತಿರುವುದು ಅಂತಿಮವಾಗಿ ಕ್ರಿಕೆಟ್ ಆಟವನ್ನೇ ಕೊಲ್ಲುತ್ತದೆ ಎಂದು ಎಚ್ಚರಿಕೆ ನೀಡಿರುವ ವೆಸ್ಟ್ ಇಂಡೀಸ್ ಬ್ಯಾಟರ್ ಕ್ರಿಸ್ ಗೇಲ್, ವೆಸ್ಟ್ ಇಂಡೀಸ್ ನಂತರ ಸಣ್ಣ ಮಂಡಳಿಯ ಆಟಗಾರರು ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅಭಿವೃದ್ಧಿ ಹೊಂದಲು ಉತ್ತಮ ಸಂಭಾವನೆ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಟಿ-20 ಪಂದ್ಯಗಳಿಗೆ ಖ್ಯಾತರಾಗಿರುವ ಗೇಲ್, 103 ಟೆಸ್ಟ್ ಮತ್ತು 301 ಏಕದಿನ ಪಂದ್ಯಗಳನ್ನಾಡಿದ್ದಾರೆ. ಕ್ರಿಕೆಟ್ ನಲ್ಲಿ ಕೇವಲ ಬಿಗ್ ತ್ರೀಗಳ ಪ್ರಾಬಲ್ಯ ಹೆಚ್ಚಿನ ಕಾಲ ಪಂದ್ಯಗಳು ನಡೆಯುವಲ್ಲಿ ಉತ್ತಮವಾದದ್ದಲ್ಲ ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಇಂಡಿಯನ್ ಹಿರಿಯರ ಪ್ರೀಮಿಯರ್ ಲೀಗ್ ಸಂದರ್ಭದಲ್ಲಿ ಮಾತನಾಡಿದ ಅವರು”ಇತ್ತೀಚಿನ ವರ್ಷಗಳಲ್ಲಿ ಕ್ರಿಕೆಟ್ ನಲ್ಲಿ ಸ್ವಲ್ವ ಬದಲಾವಣೆಯಾಗಿದೆ. ಇದೊಂದು ದೊಡ್ಡ ವ್ಯವಹಾರವಾಗಿದೆ. ಟಿ-20 ಲೀಗ್ ಮಾತ್ರವಲ್ಲದೇ ಟೆಸ್ಟ್ ಕ್ರಿಕೆಟ್ ನಿಂದಲೂ ಅಪಾರ ಪ್ರಮಾಣದ ಹಣವನ್ನು ಬಾಚಲಾಗುತ್ತಿದೆ. ಸಣ್ಣ ತಂಡಗಳಿಗಿಂತ ದೊಡ್ಡ ತಂಡಗಳು ಹೆಚ್ಚು ಸಂಭಾವನೆ ಪಡೆಯುತ್ತವೆ, ಇದರಿಂದಾಗಿ ಅವರಿಗೆ ಅನುಕೂಲವಾಗುತ್ತದೆ. ಇದರಲ್ಲಿ ರಚನಾತ್ಮಕತೆಯ ಅಗತ್ಯವಿದೆ. ಇದರಿಂದ ಪ್ರತಿಯೊಬ್ಬರೂ ಪ್ರಯೋಜನ ಪಡೆಯುತ್ತಾರೆ. ಅನಾನುಕೂಲಕರ ಮತ್ತು ಕೆಳ-ಶ್ರೇಯಾಂಕದ ತಂಡಗಳು ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಆಟಗಳನ್ನು ಆಡುವ ಅಗತ್ಯವಿದೆ. ಅವರಿಗೆ ಮೂಲಸೌಕರ್ಯಗಳನ್ನು ಒದಗಿಸಬೇಕಾಗಿದೆ. ಅಲ್ಲದೇ ಅವರು ಕೂಡಾ ಚೆನ್ನಾಗಿಯೇ ಆಡುವುದರಿಂದ ದೊಡ್ಡ ತಂಡಗಳಂತೆ ಆಟಗಾರರಿಗೆ ಉತ್ತಮ ವೇತನವನ್ನು ನೀಡಬೇಕಾಗಿದೆ ಎಂದರು.
