ಉದಯವಾಹಿನಿ, ಶ್ರೀನಗರ: ಆಪರೇಷನ್‌ ಸಿಂಧೂರದ(Operation Sindoor) ಬಳಿಕ ಭಾರತೀಯ ಸೇನೆ(Indian Army) ಉಗ್ರರನ್ನು(Terrorists) ಸದೆಬಡಿಯಲು ಟೊಂಕ ಕಟ್ಟಿ ನಿಂತಿದ್ದು, ಜಮ್ಮು-ಕಾಶ್ಮೀರ(Jammu Kashmir)ದ ಪ್ರಾಂತ್ಯದಲ್ಲಿ ಅವಿತಿರುವ ಉಗ್ರರ ಹೆಡೆಮುರಿ ಕಟ್ಟಲು ಆಪರೇಷನ್‌ಗಳ ಸರಮಾಲೆಯನ್ನೇ ಸೇನೆ ಆರಂಭಿಸಿದೆ. ಸದ್ಯ ಉಗ್ರರ ಪಾಲಿಗೆ ಭಾರತೀಯ ಸೈನಿಕರು ಸಿಂಹಸ್ವಪ್ನವಾಗಿ ಕಾಡುತ್ತಿದ್ದು, ಕಳೆದ ಒಂದೆರೆಡು ತಿಂಗಳಿಂದ ಉಗ್ರರ ವಿರುದ್ಧ ಹೋರಾಟವನ್ನು ತೀವ್ರಗೊಳಿಸಿರುವ ಸೇನೆ 15ಕ್ಕೂ ಹೆಚ್ಚು ಉಗ್ರರನ್ನು ಹೊಸಕಿಹಾಕಿದೆ. ಈಗ ಮತ್ತೆ ಯಶಸ್ವಿ ಕಾರ್ಯಾಚಾರಣೆ ನಡೆಸಿದ ಭದ್ರತಾ ಸಿಬ್ಬಂದಿಗಳು ಭಾರೀ ಪ್ರಮಾಣ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ.

ಜಮ್ಮು-ಕಾಶ್ಮೀರದ ಪೂಂಚ್ ಸೆಕ್ಟರ್‌( Poonch Sector)ನಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ ಉಗ್ರಗಾಮಿಗಳ ಒಳನುಸುಳುವಿಕೆ ಪ್ರಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿದ್ದು, ಚೀನಾದ ಹ್ಯಾಂಡ್ ಗ್ರೆನೇಡ್‌ಗಳು (Chinese hand grenades) ಸೇರಿದಂತೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು(weapons) ಹಾಗೂ ಸಿಡಿಮದ್ದುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಉಗ್ರರ ಒಳನುಸುಳುವಿಕೆ ಹಾಗೂ ಶಸ್ತ್ರಾಸ್ತ್ರ ಸಾಗಾಣಿಕೆ ಬಗ್ಗೆ ಜಮ್ಮು -ಕಾಶ್ಮೀರ ಪೊಲೀಸರು ನೀಡಿದ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಭಾರತೀಯ ಸೇನೆ ಮತ್ತು ಜಮ್ಮು- ಕಾಶ್ಮೀರ ಪೊಲೀಸರು ಪೂಂಚ್ ಸೆಕ್ಟರ್‌ನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದು, 20 ಚೀನಾದ ಹ್ಯಾಂಡ್ ಗ್ರೆನೇಡ್‌ಗಳು ಸೇರಿದಂತೆ ಮದ್ದು ಗುಂಡುಗಳು ಮತ್ತಿತರ ಶಸ್ತ್ರಾಸ್ತ್ರಗಳನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!