ಉದಯವಾಹಿನಿ, ಬೆಂಗಳೂರು: ಆರೋಗ್ಯಕ್ಕಿಂತ ಮಹಾಭಾಗ್ಯ ಇನ್ನೊಂದಿಲ್ಲ. ಆಸ್ತಿ ಅಂತಸ್ತು ಐಶ್ವರ್ಯ ಎಲ್ಲವೂ ಇದ್ದು ಆರೋಗ್ಯವೊಂದು ಕೈ ಕೊಟ್ಟರೆ ಎಲ್ಲವೂ ವ್ಯರ್ಥ ಸಾಧನೆ ಎಂಬಂತಾಗುತ್ತದೆ. ಇಂದಿನ ದಿನಮಾನದಲ್ಲಿ ಮನುಷ್ಯ ಗಳಿಕೆಯ ಬೆನ್ನತ್ತಿ ಓಡಿ, ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾನೆ. ದೇಹಕ್ಕೆ ಮತ್ತು ಮನಸ್ಸಿಗೆ ವಿಪರೀತ ಎನ್ನುವಷ್ಟು ಒತ್ತಡ ಕೊಟ್ಟು ಅದನ್ನು ಸೂಕ್ಷ್ಮವಾಗಿಸುತ್ತಿದ್ದಾನೆ. ಅನಾರೋಗ್ಯಗಳು ಕಾಡುತ್ತಿವೆ. ದೈಹಿಕವಾಗಿ ಸುದೃಢರಾಗಿದ್ದರೂ ಮಾನಸಿಕ ಮತ್ತು ಭಾವನಾತ್ಮಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ಸಮಸ್ಯೆಯ ಮೂಲ ಹುಡುಕದೆ ಡಾಕ್ಟರ್ ಎದುರು ಹಣ ಸುರಿಯುತ್ತಿದ್ದಾನೆ. ಮನುಷ್ಯ ಈಗ ಹುಡುಕಬೇಕಿರುವುದು ಸಮಸ್ಯೆಯ ಮೂಲ ಮತ್ತು ನೆಮ್ಮದಿಯ ತಾಣ. ಎಲ್ಲ ಒತ್ತಡಗಳಿಂದ, ಮಾಲಿನ್ಯಗಳಿಂದ, ಹೊರಜಗತ್ತಿನ ಸಂಪರ್ಕದಿಂದ ಮುಕ್ತಗೊಳ್ಳುವ ಒಂದು ತಾಣ ಸಿಕ್ಕರೆ, ಪ್ರತಿಯಾಗಿ ಮನುಷ್ಯ ಏನನ್ನೂ ಕೊಡಲು ಸಿದ್ಧನಿದ್ದಾನೆ. ಇಂಥ ಸಮಯದಲ್ಲಿ ಕ್ಷೇಮವನವೆಂಬ ಕ್ಷೇಮವನ ಬಹುದೊಡ್ಡ ಭರವಸೆಯಾಗಿ ಕಂಡಿದೆ.

ಬೆಂಗಳೂರಿನಿಂದ ನೆಲಮಂಗಲ ದಾಟಿ ಕುಣಿಗಲ್ ಜಂಕ್ಷನ್‌ನಿಂದ ಚಿತ್ರದುರ್ಗದೆಡೆಗೆ ಪಯಣ ಬೆಳೆಸುತ್ತಿದ್ದರೆ, ಹೆದ್ದಾರಿಯ ಬಲಭಾಗದಲ್ಲಿ ಕ್ಷೇಮವನ ಎಂಬ ದೊಡ್ಡ ಫಲಕ ಕಣ್ಣಿಗೆ ಬೀಳುತ್ತದೆ. ಚಿತ್ರದುರ್ಗದಿಂದ ಅದೇ ಹೆದ್ದಾರಿಯಲ್ಲಿ ಬೆಂಗಳೂರಿನತ್ತ ಚಲಿಸುತ್ತಿರುವಾಗ ರಸ್ತೆಯ ಎಡಭಾಗದಲ್ಲಿ ಅದೇ ಕ್ಷೇಮವನದ ಹೆಸರು ಆಕರ್ಷಿಸುತ್ತದೆ. ಕ್ಷೇಮವನದ ಬಗ್ಗೆ ಕೇಳಿರದವರು ವಿಹಂಗಮ ನೋಟದಲ್ಲಿ ಕ್ಷೇಮವನವನ್ನು ನೋಡಿ ಇದೊಂದು ಐಷಾರಾಮಿ ರೆಸಾರ್ಟ್ ಇರಬಹುದು ಅಂದುಕೊಳ್ಳುತ್ತಾರೆ. ಕೆಲವೇ ಕ್ಷಣಗಳಲ್ಲಿ ಸೆಳೆದುಕೊಳ್ಳುವ ಅದರ ಸೌಂದರ್ಯಕ್ಕೆ ಮಾರು ಹೋಗುತ್ತಾರೆ. ಹೌದು, ಕ್ಷೇಮವನವನ್ನು ರೆಸಾರ್ಟ್ ಅಂದರೆ ತಪ್ಪಿಲ್ಲ. ಆದರೆ ಇದು ನಾವು ನೀವು ಅಂದುಕೊಳ್ಳುವ ಥರದ ರೆಸಾರ್ಟ್ ಅಲ್ಲ. ಇದು ವೆಲ್ ನೆಸ್ ರೆಸಾರ್ಟ್! ವೆಲ್‌ನೆಸ್ ಸ್ಯಾಂಕ್ಚುಯರಿ ಅಂತಲೂ ಕರೆಯಲಡ್ಡಿಯಿಲ್ಲ.

Leave a Reply

Your email address will not be published. Required fields are marked *

error: Content is protected !!