ಉದಯವಾಹಿನಿ, ಈ ಬಾರಿಯ ದಸರಾ ರಜೆಯಲ್ಲಿ ಪಿಕ್ನಿಕ್, ಟೂರ್ ಹಾಗೂ ಟ್ರಾವೆಲ್ ಪ್ರಿಯರಿಗೆಂದೇ ನಾನಾ ಬಗೆಯ ಸೀಸನ್ ಟ್ರಾವೆಲ್ ಫ್ಯಾಷನ್‌ವೇರ್‌ಗಳು ಬಂದಿವೆ. ಈ ಸೀಸನ್‌ನ ಹಾಲಿಡೇ ಫ್ಯಾಷನ್ ಕೆಟಗರಿಗೆ ಸೇರಿಕೊಂಡಿವೆ. ಹುಡುಗಿಯರು ಹಾಗೂ ಮಹಿಳೆಯರಿಗೆಂದೇ ಬಿಂದಾಸ್ ಹಾಗೂ ಕಂಫರ್ಟಬಲ್ ಲುಕ್ ನೀಡುವಂತಹ ಔಟ್‌ಫಿಟ್‌ಗಳು ಈ ಕೆಟಗರಿಯಲ್ಲಿ ಬಂದಿವೆ. ಅವುಗಳಲ್ಲಿ ವೈಬ್ರೆಂಟ್ ಶೇಡ್ ಹಾಗೂ ಫಂಕಿ ಲುಕ್ ನೀಡುವ ಡಂಗ್ರೀಸ್, ಕೇಪ್ರೀಸ್, ಕಟೌಟ್ ಡ್ರೆಸ್‌ಗಳು, ತ್ರಿ ಫೋರ್ತ್ ಜಂಪ್ ಸೂಟ್ಸ್, ವೆರೈಟಿ ಡಿಸೈನ್‌ನ ಕೋ ಆರ್ಡ್ ಸೆಟ್, ರೆಸಾರ್ಟ್‌ವೇರ್ಸ್, ಬೀಚ್‌ವೇರ್ಸ್, ಅಸ್ಸೆಮ್ಮೆಟ್ರಿಕಲ್ ಮ್ಯಾಕ್ಸಿ, ಮಿನಿ, ಮಿಡಿ ಸ್ಕರ್ಟ್ಸ್ ಬಂದಿವೆ. ಸಿಂಪಲ್ ಔಟ್‌ಫಿಟ್ ಬಯಸುವವರಿಗೆ ಶಾರ್ಟ್ ಕುರ್ತಾ, ಶಾರ್ಟ್ ಶರಾರ-ಗರಾರ, ಪಲ್ಹಾಜೋ, ಜಾಗರ್ಸ್ ಪ್ಯಾಂಟ್, ಕೋ ಆರ್ಡ್ ಸೆಟ್‌ಗಳು ಲಗ್ಗೆ ಇಟ್ಟಿವೆ.
ಇನ್ನು, ಮೆನ್ಸ್ ಹಾಲಿಡೇ ಫ್ಯಾಷನ್‌ನಲ್ಲಿ, ಈ ಬಾರಿ ಸ್ಲಿವ್‌ಲೆಸ್ ಟೆಕ್ಸ್ಟ್, ಪ್ರಿಂಟೆಡ್, ಫ್ಲೋರಲ್ ಟೀ ಶರ್ಟ್ಸ್, ಬಾಡಿಫಿಟ್, ಬಾಡಿಕಾನ್ ಹಾಫ್ ಟೀ ಶರ್ಟ್ಸ್, ಜಿಪ್ ಟೀ ಶರ್ಟ್ ಸ್ಟೈಲ್ ಜಾಕೆಟ್ಸ್, ಪಾಕೆಟ್ ಪ್ರಿಂಟೆಡ್ ಬಮರ್ಡಾ, ಕಾರ್ಗೋ ಪ್ಯಾಂಟ್ಸ್, ಜಾಗರ್ ಪ್ಯಾಂಟ್ಸ್ ಈ ದಸರೆ ಹಾಲಿಡೇ ಮೆನ್ಸ್ ಟ್ರಾವೆಲ್ ಫ್ಯಾಷನ್ಗೆ ಬಂದಿವೆ. ಇನ್ನು, ಫ್ಲೋರಲ್ ಡಿಸೈನ್ಸ್ ಎಲ್ಲಾ ಔಟ್‌ಫಿಟ್‌ಗಳಲ್ಲೂ ಕಾಣಿಸುತ್ತಿವೆ. ಸ್ಪೋರ್ಟ್ಸ್ ಜಾಕೆಟ್ ಹಾಗೂ ಔಟ್‌ಫಿಟ್‌ಗಳು ಹುಡುಗರನ್ನು ಸವಾರಿ ಮಾಡುತ್ತಿವೆ ಎನ್ನುತ್ತಾರೆ ಮೆನ್ಸ್ ಸ್ಟೈಲಿಸ್ಟ್ ಜಾಸ್.
ಕೆಲವು ರಜೆಯ ಮೋಜು ಲಾಂಗ್ ಟೂರ್ ಆಗಬಹುದು, ಇಲ್ಲವೇ 1 ದಿನದ ಪಿಕ್ನಿಕ್ ಆಗಬಹುದು ಅಥವಾ ಟ್ರೆಕ್ಕಿಂಗ್ ಇಲ್ಲವೇ ಸಾಹಸಮಯ ಟ್ರಿಪ್ ಅಥವಾ ವಂಡರ್ಲಾದಂತಹ ಸ್ಪಾಟ್‌ಗಳಲ್ಲಾಗಬಹುದು. ಸೋ, ಆಯಾ ಸ್ಪಾಟ್‌ಗೆ ತಕ್ಕಂತೆ ಧರಿಸುವ ಹಾಲಿಡೇ ಡ್ರೆಸ್‌ಕೋಡ್‌ಗಳು ಬದಲಾಗುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Leave a Reply

Your email address will not be published. Required fields are marked *

error: Content is protected !!