ಉದಯವಾಹಿನಿ, ಕ್ಯಾಲಿಫೋರ್ನಿಯಾ: ಕ್ಯಾಲಿಫೋರ್ನಿಯಾದಲ್ಲಿ ತಿಯಾ ಮತ್ತು ಕೆರೊಲ್‌ ಎಂಬ ಇಬ್ಬರು ಯುವತಿಯರು ಪರಸ್ಪರ ವಿವಾಹವಾಗಿದ್ದಾರೆ. ಸಾಂಪ್ರದಾಯಿಕ ಹಿಂದೂ ವಿಧಿಗಳೊಂದಿಗೆ ನಡೆಸಿರುವ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ವಿಡಿಯೋದಲ್ಲಿ ತಿಯಾ ಮತ್ತು ಕೆರೊಲ್‌ ತಮ್ಮ ಪೋಷಕರೊಂದಿಗೆ ಸಾಂಪ್ರದಾಯಿಕ ಲೆಹೆಂಗಾ ಧರಿಸಿ ಮದುವೆಯ ಮೆರವಣಿಗೆಯಲ್ಲಿ ನಡೆಯುವುದು, ಹಾರ ಹಾಕಿಕೊಳ್ಳುವುದು, ಪೂಜೆ ನೆರವೇರಿಸುವುದು ಮತ್ತು ಹಿರಿಯರಿಂದ ಆಶೀರ್ವಾದ ಪಡೆಯುವ ದೃಶ್ಯಗಳಿವೆ.
ಈ ವಿಡಿಯೋ ಎಕ್ಸ್‌ನಲ್ಲಿ ವೈರಲ್ ಆಗಿದ್ದು, “ನಾನು ಸಲಿಂಗ ವಿವಾಹವನ್ನು ಬೆಂಬಲಿಸುತ್ತೇನೆ, ಆದರೆ ಇಬ್ಬರು ಮಹಿಳೆಯರ ಅಥವಾ ಇಬ್ಬರು ಪುರುಷರ ನಡುವೆ ನಿಖಾ ನಡೆದಿರುವುದನ್ನು ಇನ್ನೂ ನೋಡಿಲ್ಲ. ಹಿಂದೂ ಸಂಪ್ರದಾಯಗಳನ್ನು ಏಕೆ ಬದಲಾಯಿಸಬೇಕು? ಕೋರ್ಟ್‌ ಮದುವೆ ಮಾಡಿಕೊಂಡು ಮುಂದುವರಿಯಿರಿ. ಇದು ಕೇವಲ ಅಪಹಾಸ್ಯವಷ್ಟೇ” ಎಂದು ಒಬ್ಬರು ಒಬ್ಬರು ಬರೆದುಕೊಂಡಿದ್ದಾರೆ.

ಒಬ್ಬ ಬಳಕೆದಾರರು, “ವಿವಾಹವೆಂದರೆ ಕೇವಲ ಗಂಡು-ಹೆಣ್ಣಿನ ನಡುವಿನ ಸಂಬಂಧ ಮಾತ್ರ. ಈ ರೀತಿಯ ಮೂರ್ಖತನ ಇತಿಹಾಸದಲ್ಲಿ ಎಂದೂ ನಡೆದಿಲ್ಲ. ಇದನ್ನು ಒಳ್ಳೆಯ ಸ್ನೇಹ ಎಂದು ಕರೆಯಬಹುದು, ಆದರೆ ವಿವಾಹವಲ್ಲ” ಎಂದು ಟೀಕಿಸಿದರೆ, ಮತ್ತೊಬ್ಬರು, “ಇದರಲ್ಲಿ ತಪ್ಪೇನಿದೆ? ಅವರು ಹಿಂದೂ ಸಂಪ್ರದಾಯದಂತೆ ವಿವಾಹವಾದರೆ ತೊಂದರೆಯೇನು? ಇದನ್ನು ವಿರೋಧಿಸಿದರೆ, ಅವರು ಬೇರೆ ಧರ್ಮದ ಸಂಪ್ರದಾಯವನ್ನು ಅನುಸರಿಸುತ್ತಾರೆ. ಅದನ್ನು ಬಯಸುತ್ತೀರಾ?” ಎಂದು ಬೆಂಬಲಿಸಿದ್ದಾರೆ. “ವಿವಾಹವನ್ನು ಪವಿತ್ರವಾಗಿಡಿ, ಇದು ರಂಗಿನ ರೀಮಿಕ್ಸ್‌ ಅಲ್ಲ” ಎಂದು ಒಬ್ಬರು ಕಿಡಿಕಾರಿದರೆ, “ಇದು ಕೇವಲ ಜನರು ತಮ್ಮ ಜೀವನವನ್ನು ಜೀವಿಸುವ ರೀತಿ” ಎಂದು ಇನ್ನೊಬ್ಬರು ಸರಳವಾಗಿ ಹೇಳಿದ್ದಾರೆ.
023ರ ಆರಂಭದಲ್ಲಿ ಭಾರತದಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಸಿಗಬಹುದೆಂಬ ಆಶಾಭಾವ ಇತ್ತು. ಆದರೆ, ಸುಪ್ರೀಂ ಕೋರ್ಟ್‌ ಈ ಅರ್ಜಿಯನ್ನು ತಿರಸ್ಕರಿಸಿ, ಎಲ್‌ಜಿಬಿಟಿಕ್ಯೂ ದಂಪತಿಗಳಿಗೆ ಹೆಚ್ಚಿನ ಕಾನೂನು ಹಕ್ಕುಗಳನ್ನು ನೀಡಲು ಒಂದು ಸಮಿತಿಯನ್ನು ರಚಿಸುವುದಾಗಿ ತಿಳಿಸಿತು.

Leave a Reply

Your email address will not be published. Required fields are marked *

error: Content is protected !!