ಉದಯವಾಹಿನಿ, ಜೈಪುರ: ಹೋಟೆಲ್ ಒಂದರಲ್ಲಿ ಉಳಿದುಕೊಳ್ಳಲು ಹೋದಾಗ ಅತಿಥಿಗಳು ದಿಗ್ಭ್ರಮೆಗೊಳಗಾಗುವಂತಹ ಘಟನೆ ನಡೆದಿದೆ. ರಾಜಸ್ಥಾನದ ) ಹೋಟೆಲ್‍ಗೆ ಅತಿಥಿಗಳು ಶೌಚಾಲಯದೊಳಗೆ ಹೋದಾಗ 5 ಅಡಿ ಉದ್ದದ ನಾಗರಹಾವನ್ನು ನೋಡಿದ್ದಾರೆ. ಯಾತ್ರಾ ಸ್ಥಳವಾದ ಅಜ್ಮೀರ್‌ನ ಪುಷ್ಕರ್‌ನಲ್ಲಿರುವ ಹೋಟೆಲ್‌ನ ಎರಡನೇ ಮಹಡಿಯಲ್ಲಿ ಈ ಘಟನೆ ಸಂಭವಿಸಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನಾಗರಹಾವು ಶೌಚಾಲಯದ ಕಮೋಡ್ ಒಳಗಿನಿಂದ ಹೆಡೆಯೆತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು.
ಕೂಡಲೇ ಹೋಟೆಲ್ ಸಿಬ್ಬಂದಿಗೆ ಅತಿಥಿಗಳು ಮಾಹಿತಿ ನೀಡಿದ್ದಾರೆ. ಹೋಟೆಲ್ ಆಡಳಿತ ಮಂಡಳಿಯು ತಕ್ಷಣ ರಾಜಸ್ಥಾನ ಕೋಬ್ರಾ ತಂಡಕ್ಕೆ ಘಟನೆಯ ಬಗ್ಗೆ ಮಾಹಿತಿ ನೀಡಿ, ಹಾವನ್ನು ರಕ್ಷಿಸಲಾಯಿತು. ವಿಡಿಯೊದಲ್ಲಿ ಒಬ್ಬ ಮಹಿಳೆ, ಈಗ ನಾವು ಇಲ್ಲಿ ಕುಳಿತುಕೊಳ್ಳುವ ಮೊದಲು ಎಚ್ಚರಿಕೆಯಿಂದ ಯೋಚಿಸುತ್ತೇವೆ ಎಂದು ಹೇಳುವುದನ್ನು ಕೇಳಬಹುದು. ಇನ್ನೊಬ್ಬ ವ್ಯಕ್ತಿ, ನಾನು ಇಲ್ಲಿ ಕುಳಿತುಕೊಳ್ಳುವುದೇ ಇಲ್ಲ ಎಂದು ಹೇಳಿದರು. ಈ ನಾಗರಹಾವು ಎರಡನೇ ಮಹಡಿಗೆ ಹೇಗೆ ತಲುಪಿತು? ಎಂದು ಅಲ್ಲಿದ್ದವರು ಅಚ್ಚರಿಪಟ್ಟಿದ್ದಾರೆ. ಈ ಭಯಾನಕ ಘಟನೆಯ ಬಗ್ಗೆ ಜನರು ಕಾಮೆಂಟ್ ಮಾಡುವುದರೊಂದಿಗೆ ವಿಡಿಯೊ ತ್ವರಿತವಾಗಿ ವೈರಲ್ ಆಯಿತು. ಹೋಟೆಲ್ ಶೌಚಾಲಯದಲ್ಲಿ ಹಾವು ಇರುವುದನ್ನು ನೋಡಿ ಅನೇಕ ಜನರು ಆಘಾತಕ್ಕೊಳಗಾದರು. ಆದರೆ ಇತರರು ಇದೇ ರೀತಿಯ ಅನುಭವಗಳನ್ನು ಹೇಳಿದರು.

Leave a Reply

Your email address will not be published. Required fields are marked *

error: Content is protected !!