ಉದಯವಾಹಿನಿ,ಮುಂಬೈ: ಮುಂಬೈ ಮೆಟ್ರೋಪಾಲಿಟನ್ ಪ್ರದೇಶ ಹಾಗೂ ಹೊರ ವಲಯಗಳಲ್ಲಿ ಬೆಳಗಿನಿಂದಲೇ ಸಾಧಾರಣೆ ಮಳೆ ಸುರಿಯುತ್ತಿತ್ತು. ಮುಂಗಾರು ಮಳೆಯ ಹೊಡೆತಕ್ಕೆ ವಾಣಿಜ್ಯ ನಗರಿಯ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಸ್ಥಳೀಯ ರೈಲುಗಳ ಸಂಚಾರಕ್ಕೂ ಅಡ್ಡಿ ಆತಂಕ ಎದುರಾದ್ದು, ಹಲವು ರೈಲುಗಳ ಸಂಚಾರವನ್ನು ನಿಲ್ಲಿಸಲಾಗಿದೆ. ಮತ್ತೆ ಕೆಲವು ರೈಲುಗಳು ನಿಧಾನಗತಿಯಲ್ಲಿ ಚಲಿಸುವಂತೆ ಮಾಡಲಾಗಿದೆ. ಮುಂಬೈ ಮಹಾ ನಗರದಲ್ಲಿ 31 ಮಿ. ಮೀ. ಮಳೆ ಆಗಿದೆ. ಇನ್ನು ಮುಂಬೈ ಪೂರ್ವ ಹೊರ ವಲಯದಲ್ಲಿ 45 ಮಿ.ಮೀ. ಮಳೆ ಆಗಿದ್ದರೆ, ಪಶ್ಚಿಮ ಹೊರ ವಲಯದಲ್ಲಿ 61 ಮಿ. ಮೀ. ಮಳೆ ಆಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
