ಉದಯವಾಹಿನಿ,ಹೊಸದಿಲ್ಲಿ: ಈಶಾನ್ಯ ದೆಹಲಿಯ ಹರ್ಷ್ ವಿಹಾರ್ ಪ್ರದೇಶದಲ್ಲಿ 51 ವರ್ಷದ ಆಟೋರಿಕ್ಷಾ ಚಾಲಕನೊಬ್ಬ ಮಳೆ ನೀರಿನಿಂದ ತುಂಬಿದ ಕಂದಕದಲ್ಲಿ ತನ್ನ ವಾಹನ ಆಕಸ್ಮಿಕವಾಗಿ ಬಿದ್ದಿದ್ದರಿಂದ ಅದರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಈ ಪ್ರದೇಶದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲು ಕಂದಕವನ್ನು ಅಗೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದೆರಡು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಳ್ಳದಲ್ಲಿ ಮಳೆ ನೀರು ತುಂಬಿದೆ. ಅದೇ ಮಾರ್ಗವಾಗಿ ಬಂದ ಆಟೋ ಚಾಲಕನಿಗೆ ಕಂದಕ ಇರುವುದು ಗೊತ್ತಾಗದೇ ಈ ಅನಾಹುತ ಸಂಭವಿಸಿದೆ.
