ಉದಯವಾಹಿನಿ, ಆರೆಂಜ್ ಬಣ್ಣ ಅಂದರೇ, ಕಿತ್ತಳೆ ವರ್ಣ ನೋಡಲು ಆಕರ್ಷಕವಾಗಿ ಕಾಣುವುದು ಮಾತ್ರವಲ್ಲ, ನೂರು ಜನರ ಮಧ್ಯೆಯೂ ಎದ್ದು ಕಾಣುವಂತಹ ವರ್ಣವಿದು. ಹಾಗಾಗಿಯೇ ಫ್ಯಾಷನಿಸ್ಟಾಗಳು ಈ ಬಣ್ಣವನ್ನು ಬೋಲ್ಡ್ ಕಲರ್ ಲಿಸ್ಟ್‌ಗೆ ಸೇರಿಸಿದ್ದಾರೆ. ಅಲ್ಲದೇ, ಕಿತ್ತಳೆ ವರ್ಣವನ್ನು ಹ್ಯಾಪಿ ಕಲರ್ ಎಂದು ಕೂಡ ಕರೆಯಲಾಗುತ್ತದೆ. ಈ ಕಿತ್ತಳೆ ಶೇಡ್‌ನ ಸೀರೆ ಹಾಗೂ ಡಿಸೈನರ್‌ವೇರ್ ಧರಿಸುವವರು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡಲ್ಲಿ ಮತ್ತಷ್ಟು ಅತ್ಯಾಕರ್ಷಕವಾಗಿ ಕಾಣಿಸುವುದರ ಬಗ್ಗೆ ಯಾವುದೇ ಸಂದೇಹವಿಲ್ಲ ಎನ್ನುತ್ತಾರೆ ಡಿಸೈನರ್ಸ್.
ಅಂದ ಹಾಗೆ, ಕಿತ್ತಳೆಯಲ್ಲೂ ನಾನಾ ಶೇಡ್‌ಗಳು ಸೇರಿವೆ. ಕಿತ್ತಳೆ ವರ್ಣದಲ್ಲಿ ಕೇಸರಿ, ತಿಳಿ ಕೇಸರಿ, ಮಾರ್ಸೆಲ್ಲಾ, ಬ್ರಿಕ್ ಆರೆಂಜ್ ಹೀಗೆ ಸಾಕಷ್ಟು ವರ್ಣಗಳು ಕಂಬೈನ್ ಆಗಿವೆ. ಈ ವರ್ಣ ಭಾರತೀಯರಿಗೆ ಅತಿ ಹೆಚ್ಚು ಹೊಂದುತ್ತವೆ ಎಂದು ಸಾಕಷ್ಟು ಬ್ಯೂಟಿ ಸಮೀಕ್ಷೆಗಳು ಸಾಬೀತು ಪಡಿಸಿವೆ ಕೂಡ.
ನವರಾತ್ರಿಗೆ ಕಿತ್ತಳೆ ವರ್ಣದ ಸೀರೆಯನ್ನು ಧರಿಸಿದಾಗ ಆದಷ್ಟೂ ಕಾಂಟ್ರಾಸ್ಟ್ ಬ್ಲೌಸ್‌ಗಳನ್ನು ಅವಾಯ್ಡ್ ಮಾಡಿ. ಎಲ್ಲದಕ್ಕಿಂತ ಹೆಚ್ಚಾಗಿ ಈ ವರ್ಣಕ್ಕೆ ಹೆಚ್ಚು ಆಕ್ಸೆಸರೀಸ್‌ನ ಅಗತ್ಯವಿಲ್ಲ. ಯಾಕೆಂದರೆ, ಸೀರೆಯೇ ಎದ್ದು ಕಾಣುವುದರಿಂದ ಸಿಂಪಲ್ ಆಕ್ಸೆಸರೀಸ್‌ಗಳನ್ನು ಧರಿಸಿದರಾಯಿತು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.ಈಗಾಗಲೇ ನಿಮ್ಮ ಬಳಿ ರೇಷ್ಮೆಯ ಆರೆಂಜ್ ಸೀರೆಗಳು ಇದ್ದಲ್ಲಿ ಅವನ್ನು ಡಿಫರೆಂಟ್ ಡ್ರೆಪಿಂಗ್ ಮಾಡಿ, ಉಡಿ. ಆಗ ವಿಭಿನ್ನ ಲುಕ್ ನಿಮ್ಮದಾಗುವುದು. ಇವಕ್ಕೆ ಗೋಲ್ಡನ್ ಜ್ಯುವೆಲರಿಗಳು ಮ್ಯಾಚ್ ಆಗುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
