ಉದಯವಾಹಿನಿ, ಭಾರತದ ವೃದ್ಧ ಜನಸಂಖ್ಯೆ ಈಗಾಗಲೇ 150 ಮಿಲಿಯನ್ ದಾಟಿದ್ದು, 2050ರ ವೇಳೆಗೆ ಸುಮಾರು 340 ಮಿಲಿಯನ್ ತಲುಪಲಿದೆ ಎಂಬ ಅಂದಾಜು ಇದೆ. ಆರೋಗ್ಯಕರ ವಯೋವೃದ್ಧತೆ ಮುಖ್ಯ ಆದ್ಯತೆಯಾಗಿದೆ. ವಿಶ್ವ ಫಿಸಿಯೋಥೆರಪಿ ದಿನ 2025ರ ಅಂಗವಾಗಿ ಪ್ರಕಟಗೊಂಡ “ಆರೋಗ್ಯಕರ ವಯೋವೃದ್ಧತೆಗೆ ಫಿಸಿಯೋಥೆರಪಿ” ಎಂಬ ವಿಷಯವು, ಹಿರಿಯರು ಚುರುಕಾಗಿ, ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಿಕೊಂಡು, ಉತ್ತಮ ಜೀವನಮಟ್ಟ ವನ್ನು ಅನುಭವಿಸಲು ಫಿಸಿಯೋಥೆರಪಿಯ ಪಾತ್ರವನ್ನು ಹೈಲೈಟ್ ಮಾಡುತ್ತದೆ.

ಫಿಸಿಯೋಥೆರಪಿ ಹೆಚ್ಚು ಮೆಚ್ಚುಗೆ ಪಡೆಯದಿದ್ದರೂ, ವಯಸ್ಸಾದವರ ಜೀವನಮಟ್ಟವನ್ನು ಸುಧಾರಿಸಲು ಅತ್ಯಂತ ಅಗತ್ಯವಾಗಿದ್ದು, ಆರೋಗ್ಯಕರ ವಯೋವೃದ್ಧತೆಯನ್ನು ಉತ್ತೇಜಿಸುವಲ್ಲಿ ಅವಿಭಾಜ್ಯವಾಗಿದೆ. ವೃದ್ಧಾಪ್ಯದಲ್ಲಿ ಕಂಡುಬರುವ ನಿಶಕ್ತಿ ಸಮತೋಲನದ ಕೊರತೆ, ಸಂಧಿವೇದನೆ, ಅಸ್ಥಿಸೌಕ್ಷಮ್ಯ , ಸಂಧಿವಾತ ಬಿದ್ದು ಹೋಗುವ ಅಪಾಯ ಮುಂತಾದ ಅನೇಕ ಸಮಸ್ಯೆಗಳನ್ನು ಶಕ್ತಿ ಹೆಚ್ಚಿಸುವುದು, ಲವಚಿಕತೆ ಸುಧಾರಿಸುವುದು, ಸಮತೋಲನ ಕಾಪಾಡುವುದು ಹಾಗೂ ಸುರಕ್ಷಿತ ಚಲನೆಯ ಮಾರ್ಗದರ್ಶನ ನೀಡುವ ವ್ಯಾಯಾ ಮಗಳ ಮೂಲಕ ತಡೆಯಬಹುದು ಅಥವಾ ನಿರ್ವಹಿಸಬಹುದು. ಇದಲ್ಲದೆ, ಹೃದ್ರೋಗ, ನರತಂತ್ರ ಮತ್ತು ಮೂಳೆ-ಸಂಧಿ ಸಂಬಂಧಿತ ಅನೇಕ ರೋಗಗಳ ಪುನಶ್ಚೇತನ ಪ್ರಕ್ರಿಯೆಯ ಅವಿಭಾಜ್ಯ ಭಾಗವೂ ಆಗಿದೆ. ನಿಯಮಿತ ದೈಹಿಕ ಚಟುವಟಿಕೆಯೊಂದಿಗೆ ಸಂಯೋಜಿಸಿದಾಗ, ಫಿಸಿಯೋಥೆರಪಿ ಹಿರಿಯರನ್ನು ಸ್ವಾವಲಂಬಿಗಳನ್ನಾಗಿ ಕಾಪಾಡಿ, ಆರೋಗ್ಯ ಸಮಸ್ಯೆಗಳನ್ನು ಕಡಿಮೆಮಾಡಿ, ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸುತ್ತದೆ.

Leave a Reply

Your email address will not be published. Required fields are marked *

error: Content is protected !!