ಉದಯವಾಹಿನಿ , ಚಂಡೀಗಢ: ಯಾವುದೇ ಒಬ್ಬ ವಿದ್ಯಾರ್ಥಿ ತನ್ನ ಗುರಿ ತಲುಪಬೇಕಾದ್ರೆ ಹಿಂದೆ ಶಿಕ್ಷಕರೊಬ್ಬರು ಇರಲೇಬೇಕು. ವಿದ್ಯಾರ್ಥಿಗಳ ತಪ್ಪುಗಳನ್ನು ತಿದ್ದುತ್ತಾ, ಜೀವನಕ್ಕೆ ದಾರಿ ದೀಪವಾಗಬೇಕಿರುವುದು ಶಿಕ್ಷಕರು ಆದ್ರೆ ಇಲ್ಲೊಬ್ಬಳು ಶಿಕ್ಷಕಿ ಅದಕ್ಕೆ ವ್ಯತಿರಿಕ್ತವಾಗಿದ್ದಾಳೆ. ವಿದ್ಯಾರ್ಥಿ ಹೋಂ ವರ್ಕ್‌ ಮಾಡಿಲ್ಲ ಅನ್ನೋ ಕಾರಣಕ್ಕೆ ಆತನ ಕೈಕಾಲು ಕಟ್ಟಿ, ತಲೆಕೆಳಗಾಗಿ ನೇತು ಹಾಕಿ ಹಿಂಸೆ ನೀಡಿ ಕ್ರೌರ್ಯ ಮೆರೆದಿದ್ದಾಳೆ.
ಹೌದು. ಹರಿಯಾಣದ ಪಾಣಿಪತ್‌ನ ಶ್ರೀಜನ್ ಪಬ್ಲಿಕ್ ಶಾಲೆಯಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿ ಹೋಂ ವರ್ಕ್‌ ಮಾಡಿಲ್ಲ ಅಂತ ಶಿಕ್ಷಕಿಯೊಬ್ಬಳು ಆತನ ಕೈಕಾಲು ಕಟ್ಟಿ, ತಲೆಕೆಳಗಾಗಿಸಿ ನೇತುಹಾಕಿದ್ದಾಳೆ, ವಿದ್ಯಾರ್ಥಿಯನ್ನ ಚೆನ್ನಾಗಿ ಥಳಿಸಿದ್ದಾಳೆ.
ಆಗಸ್ಟ್‌ 13ರಂದು ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಾಲಾ ಆಡಳಿಯ ಮಂಡಳಿಗೆ ಈ ವಿಷಯ ತಿಳಿದಿದ್ದೂ ಮುಚ್ಚಿಟ್ಟಿದ್ದರು. ಆದ್ರೆ ಹಲ್ಲೆ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದಮೇಲೆ ವಿಷಯ ಗೊತ್ತಾಗಿದೆ.
ವಿಡಿಯೋ ಆಧರಿಸಿ ಮಾಡೆಲ್‌ ಪೊಲೀಸ್‌ ಠಾಣೆಗೆ ಪೋಷಕರು ದೂರು ನೀಡಿದ್ದಾರೆ. ದೂರು ನೀಡುತ್ತಿದ್ದಂತೆ ಶಿಕ್ಷಕಿ ಕಡೆಯವರು ಎನ್ನಲಾದ ಕೆಲವರು ಪೋಷಕರಿಗೆ ದೂರು ಹಿಂಪಡೆಯುವಂತೆ ಬೆದರಿಕೆ ಹಾಕಿದ್ದಾರೆಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!