ಉದಯವಾಹಿನಿ,ಟಿಪ್ಸ್: ಮುಖ್ಯವಾಗಿ ಒತ್ತಡವು ಜೀವನದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಸುಮಾರು 90% ಭಾರತೀಯರು ಇಂದು ಒತ್ತಡದಿಂದ ಬಳಲುತ್ತಿದ್ದಾರೆ. ಹೆಚ್ಚುತ್ತಿರುವ ಒತ್ತಡದ ಮಟ್ಟಗಳು ಕೆಲವು ವರ್ಷಗಳ ಹಿಂದೆ ಭಾರತವನ್ನು ವಿಶ್ವದ ಅತ್ಯಂತ ಖಿನ್ನತೆಗೆ ಒಳಗಾದ ದೇಶ ಎಂಬ ಪಟ್ಟವನ್ನು ಮುಡಿಗೇರಿಸಿಕೊಂಡಿತ್ತು. ಒತ್ತಡದಿಂದ ತತ್ತರಿಸುತ್ತಿರುವ ಭಾರತೀಯರ ಸಂಖ್ಯೆಯು ಯಾವುದೇ ಪಾಶ್ಚಿಮಾತ್ಯ ದೇಶಗಳಿಗಿಂತ ಭಿನ್ನವಾಗಿಲ್ಲ. ಒತ್ತಡಕ್ಕೆ ಮುಖ್ಯವಾದ ಕಾರಣಗಳೆಂದರೆ ಕೆಲಸದ ಒತ್ತಡ, ಜೀವನದ ಹೋರಾಟಗಳು, ಸಂಬಂಧಗಳು, ಆರ್ಥಿಕ ಒತ್ತಡ, ಖಿನ್ನತೆಗಳು, ಆತಂಕ ಮತ್ತು ಕೆಲವು ಕಾಯಿಲೆಗಳು ಕುಡ ಆಗಿರಬಹುದು. ಒತ್ತಡವು ಹೆಚ್ಚಾದರೆ ಆರೋಗ್ಯ ಮತ್ತು ಸಂತೋಷದ ಮೇಲೆ ಪರಿಣಾಮವನ್ನು ಬೀರುತ್ತದೆ. ಸಾಮಾಜಿಕ ಬದುಕಿನಲ್ಲಿ ಮುಂಗೋಪ ಮತ್ತು ಹೆಚ್ಚು ಕಿರಿಕಿರಿಯನ್ನು ಅನುಭವಿಸಬೇಕಾಗಬಹುದು.

ಒತ್ತಡವನ್ನು ಕಡಿಮೆ ಮಾಡಬಲ್ಲ ಅಂಶಗಳು ಈ ಕೆಳಕಂಡಂತಿವೆ:-

​೧. ಸಂಗೀತ:
ಒತ್ತಡ ಮತ್ತು ಖಿನ್ನತೆಯನ್ನು ಕಡಿಮೆ ಮಾಡುವ ಶಕ್ತಿ ಸಂಗೀತಕ್ಕಿದೆ. ಹೆಚ್ಚು ಮಾನಸಿಕ ಒತ್ತಡಕ್ಕೆ ಸಿಲುಕಿದಾಗ ನಿಮಗೆ ಇಷ್ಟವಾಗುವ ಹಾಡನ್ನು ಕೇಳಿ. ಬಹುತೇಕರು ತಾವು ತುಂಬಾ ನೋವಿನಲ್ಲಿದ್ದಾಗ ನೋವಿನಿಂದ ಕೂಡಿರುವ ಹಾಡುಗಳನ್ನು ಕೇಳಲು ಬಯಸುತ್ತಾರೆ. ಆದರೆ ಇದು ತಪ್ಪು. ಇಂತಹ ಹಾಡುಗಳು ನಿಮ್ಮ ನೋವವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹಾಗಾಗಿ ನಿಮ್ಮ ಟೆನ್ಷನ್‌ ದೂರವಾಗುವ ಅಥವಾ ಸಂತೋಷದಾಯಕ ಹಾಡನ್ನು ಕೇಳಿ. ಇದು ನಿಮ್ಮ ಒತ್ತಡವನ್ನು ಪರಿಣಾಮಕಾರಿಯಾಗಿ ಬಗೆಹರಿಸುವ ಒಂದು ಉಪಾಯ.

೨. ವ್ಯಾಯಾಮ:
ವ್ಯಾಯಾಮ ಮಾಡುವುದರಿಂದ ಒತ್ತಡ ಮತ್ತು ಖಿನ್ನತೆಗಳಿಂದ ಸಂಪೂರ್ಣವಾಗಿ ಹೊರಬರಬಹುದು ಎಂಬುದು ನಿಮಗೆ ಗೊತ್ತೆ? ಒತ್ತಡದಿಂದ ಬಳಲುತ್ತಿರುವವರು ಯೋಗ ಮಾಡುವುದು ಉತ್ತಮ. ಯೋಗ ದೈಹಿಕ ಚಲನೆ, ಧ್ಯಾನ, ಲಘು ವ್ಯಾಯಾಮ ಮತ್ತು ನಿಯಂತ್ರಿತ ಉಸಿರಾಟವನ್ನು ಸಂಯೋಜಿಸುತ್ತದೆ. ಇವೆಲ್ಲವೂ ಅತ್ಯುತ್ತಮವಾದ ಒತ್ತಡ ಪರಿಹಾರವನ್ನು ನೀಡುತ್ತದೆ.

​೩. ನಿಮ್ಮ ಮಲಗುವ ದಿನಚರಿ: 
ನಾವು ಮಲಗುವ ಸಮಯವು ಕೂಡ ನಮ್ಮ ಒತ್ತಡದ ಮಟ್ಟವನ್ನು ನಿರ್ಧರಿಸುವುದರಿಂದ ಯಾವ ಸಮಯದಲ್ಲಿ ಮಲಗಬೇಕು? ಯಾವಾಗ ಏಳಬೇಕು ಎಂಬ ದಿನಚರಿಯನ್ನು ಗಮನದಲ್ಲಿಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ತಡ ಮಾಡಿ ಮಲಗುವುದು, ತಡವಾಗಿ ಏಳುವುದನ್ನು ತಪ್ಪಿಸಬಹುದು. ಹಾಗಾಗಿ ಮಲಗುವ ಮತ್ತು ಏಳುವ ಸಮಯವನ್ನು ಗೊತ್ತು ಮಾಡಿಕೊಳ್ಳಿ.

೪. ನಿಮ್ಮ ಕೆಲಸದ ಜವಾಬ್ದಾರಿಯನ್ನು ನಿಭಾಯಿಸಿ:
ಒತ್ತಡದ ಕೆಲಸವು ಸಾಕಷ್ಟು ಮಾನಸಿಕ ಮತ್ತು ದೈಹಿಕ ತೊಂದರೆಗಳಿಗೆ ಕಾರಣವಾಗುತ್ತದೆ. ನಿಮ್ಮ ಕೆಲಸವನ್ನು ಸಮರ್ಪಕವಾಗಿ ಯೋಜನೆ ಮಾಡಿಕೊಳ್ಳಿ. ಯಾವ ಸಮಯದಲ್ಲಿ ಮಾಡಿ ಮುಗಿಸಬೇಕು ಎಂಬುದನ್ನು ನಿರ್ಧರಿಸಿ. ಇದರಿಂದ ನಿಮ್ಮ ಜವಾಬ್ದಾರಿಯನ್ನು ನೀವು ಸಮರ್ಪಕವಾಗಿ ನಿಭಾಯಿಸಬಲ್ಲಿರಿ.

​೫. ಸಮತೋಲಿತವಾದ ಆಹಾರವನ್ನು ಸೇವನೆ ಮಾಡಿ:
ಒತ್ತಡ ಅಥವಾ ಖಿನ್ನತೆ, ಆರೋಗ್ಯ ಯಾವುದೇ ಒಂದು ವಿಷಯಕ್ಕೆ ಬಂದರು ಸಮತೋಲಿತವಾದ ಆಹಾರವನ್ನು ಸೇವನೆ ಮಾಡುವುದು ಬಹಳ ಮುಖ್ಯ. ಮುಖ್ಯವಾಗಿ ಕಳಪೆ ಆಹಾರವು ಒತ್ತಡದ ಕಡೆಗೆ ಹೆಚ್ಚಿನ ಪ್ರತಿಕ್ರಿಯಾತ್ಮಕತೆಯನ್ನು ಸೃಷ್ಟಿಸುತ್ತದೆ. ಹೆಚ್ಚಿನ ಕೊಬ್ಬು, ಸಕ್ಕರೆಗಳಿಂದ ಕೂಡಿರುವ ಆಹಾರ ಮತ್ತು ಪಾನೀಯಗಳಿಂದ ಆದಷ್ಟು ದೂರವಿರಿ.

ಸಂಸ್ಕರಿಸಿದ, ಕಾರ್ಬೋಹೈಡ್ರೇಟ್‌ ಆಧಾರಿತ ಆಹಾರಗಳು ರಕ್ತದಲ್ಲಿನ ಸಕ್ಕರೆಯ ಹೆಚ್ಚಳಕ್ಕೆ ಕಾರಣವಾಗಬಹುದು. ಆರೋಗ್ಯಕರವಾದ ಆಹಾರ ಸೇವನೆಯು ದೀರ್ಘಾವಧಿಯಲ್ಲಿ ಒತ್ತಡವನ್ನು ಎದುರಿಸಲು ನಿಮಗೆ ಸಹಾಯ ಮಾಡುತ್ತದೆ. ಮೊಟ್ಟೆ, ಅವಕಾಡೊ ಮತ್ತು ವಾಲ್‌ನಟ್ಸ್‌ನಂತಹ ಆಹಾರಗಳು ಒತ್ತಡವನ್ನು ಕಡಿಮೆ ಮಾಡಿ, ಶಕ್ತಿಯನ್ನು ಉತ್ತೇಜಿಸುತ್ತದೆ. ಸವಾಲುಗಳನ್ನು ನೀವು ಎದುರಿಸುವಾಗ ಧನಾತ್ಮಕವಾದ ಅಲೋಚನೆ ಮಾಡಿ. ಇದರಿಂದ ನೀವು ಒತ್ತಡಕ್ಕೆ ಒಳಗಾಗುವುದನ್ನು ತಪ್ಪಿಸಬಹುದು.

Leave a Reply

Your email address will not be published. Required fields are marked *

error: Content is protected !!