ಉದಯವಾಹಿನಿ, ಸಿಂಪಲ್ ಸುನಿ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಗತವೈಭವ ತೆರೆಗೆ ಬರಲು ಸಜ್ಜಾಗಿದೆ. ಯುವ ಪ್ರತಿಭೆ ದುಶ್ಯಂತ್ ನಾಯಕನಾಗಿ, ಆಶಿಕಾ ರಂಗನಾಥ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಗತವೈಭವ ಟೀಸರ್ ಅನಾವರಣ ಮಾಡುವ ಮೂಲಕ ಚಿತ್ರತಂಡ ಪ್ರಚಾರ ಕಾರ್ಯ ನಡೆಸಿದೆ.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಗತವೈಭವ ಸಿನಿಮಾದ ಸುದ್ದಿಗೋಷ್ಟಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ಗತವೈಭವ ತುಂಬಾ ಸೀರಿಯಸ್ ಆಗಿ ತೆಗೆದುಕೊಂಡ ಪ್ರಾಜೆಕ್ಟ್. ನನ್ನ ಬ್ಯಾನರ್ನಡಿ ಮಾಡಬೇಕು ಎಂದುಕೊಂಡ ಸಿನಿಮಾ ಇದು. ದುಶ್ಯಂತ್ ಈ ಪ್ರಾಜೆಕ್ಟ್ ಮಾಡಬೇಕು ಎಂದು ಬರೆದಿತ್ತು. ಅದಕ್ಕೆ ಇದು ಆಗಿದೆ. ನಾಲ್ಕು ಸಿನಿಮಾ ಮಾಡಿದಷ್ಟು ಈ ಜರ್ನಿ ಆಗಿದೆ. ಅಂದುಕೊಂಡ ರೀತಿ ಗತವೈಭವ ಮೂಡಿ ಬಂದಿದೆ. ಕೆಲವು ಸಿನಿಮಾ ಪ್ರಚಾರ ಮಾಡಿ ತೆರೆಗೆ ಬರುತ್ತವೆ. ಈ ಚಿತ್ರ ರಿಲೀಸ್ ಆದರೆ ಪ್ರಚಾರವಾಗುತ್ತವೆ. ನಾನು ಆಡಿಯನ್ಸ್ ರೀತಿ ಈ ಸಿನಿಮಾಗಾಗಿ ಕಾಯುತ್ತಿದ್ದೇವೆ. ಪ್ರತಿ ಶಾಟ್ ತುಂಬಾ ಚೆನ್ನಾಗಿ ಬಂದಿದೆ. ಪ್ರೊಡ್ಯೂಸರ್ ದೀಪಕ್ ಸರ್ ಚಿತ್ರಕ್ಕೆ ಎಲ್ಲವನ್ನೂ ಒದಗಿಸಿದ್ದಾರೆ. ದುಶ್ಯಂತ್ ನ್ಯಾಚುರಲ್ ಆರ್ಟಿಸ್ಟ್. ಆಶಿಕಾ ಫ್ಯಾಮಿಲಿ ತರ ಆಗಿದ್ದಾರೆ. ಚಿತ್ರದಲ್ಲಿ ಎಂಟರ್ಟೈನ್ಮೆಂಟ್, ಎಮೋಷನ್ ಎಲ್ಲವೂ ಇದೆ ಎಂದರು.
