ಉದಯವಾಹಿನಿ, ಇತ್ತೀಚೆಗೆ ಮದುವೆ ಸಮಾರಂಭದಲ್ಲಿ ಹಾಡು, ನೃತ್ಯ, ತಮಾಷೆ ಸಾಮಾನ್ಯವಾಗಿಬಿಟ್ಟಿದೆ. ವಿವಾಹ ಮಹೋತ್ಸವವು ಪ್ರೀತಿ, ಐಕ್ಯತೆ ಮತ್ತು ಹೊಸ ಆರಂಭಗಳನ್ನು ಆಚರಿಸಲು ಉದ್ದೇಶಿಸಲ್ಪಟ್ಟಿವೆ. ಆದರೆ, ಇಲ್ಲೊಂದೆಡೆ ವೈವಾಹಿಕ ಕಾರ್ಯಕ್ರಮವು ಆಘಾತಕಾರಿ ತಿರುವು ಪಡೆದುಕೊಂಡಿತು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಘಟನೆಯೊಂದರಲ್ಲಿ, ವರನೊಬ್ಬ ತಮ್ಮ ಮದುವೆಯ ರಾತ್ರಿ, ಆರತಕ್ಷತೆಯ ಸಮಯದಲ್ಲಿ ವಧುವು ತನ್ನ ಸೋದರಸಂಬಂಧಿಯೊಂದಿಗೆ ನೃತ್ಯ ಮಾಡುವುದನ್ನು ನೋಡಿದ ನಂತರ ಮದುವೆಯಾಗಲು ನಿರಾಕರಿಸಿರುವ ಘಟನೆ ನಡೆದಿದೆ. ಈ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ.
ನೂತನ ವಧು-ವರನ ಮದುವೆ ಸಮಾರಂಭವು ಸಂತೋಷದಾಯಕವಾಗಿ ಪ್ರಾರಂಭವಾಯಿತು. ಆದರೆ, ನೃತ್ಯದ ಬಗ್ಗೆ ಭಿನ್ನಾಭಿಪ್ರಾಯವು ವಾಗ್ವಾದಕ್ಕೆ ತಿರುಗಿದಾಗ ಉದ್ವಿಗ್ನತೆ ಹೆಚ್ಚಾಯಿತು. ನವವಿವಾಹಿತ ವಧು ತನ್ನ ಸೋದರಸಂಬಂಧಿಗಳೊಂದಿಗೆ ನೃತ್ಯ ಮಾಡುವುದನ್ನು ನೋಡಿ ವರನು ಅಸಮಾಧಾನಗೊಂಡಿದ್ದಾನೆ ಎಂದು ವರದಿಯಾಗಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ವರನು ವಧುವಿನ ಮೇಲೆ ಕೂಗಾಡುತ್ತಿರುವುದನ್ನು ಮತ್ತು ಅತಿಥಿಗಳ ಮುಂದೆ ಅವಳನ್ನು ಕೋಪದಿಂದ ಬೈಯುತ್ತಿರುವುದನ್ನು ತೋರಿಸಲಾಗಿದೆ. ವಧು ಕೂಡ ಇದಕ್ಕೆ ಪ್ರತಿಯಾಗಿ ಕೂಗಿಕೊಂಡಿದ್ದಾಳೆ ಎಂದು ವರದಿಯಾಗಿದೆ. ಇಬ್ಬರ ನಡುವೆ ಜಗಳ ಶುರುವಾಗುತ್ತಿದ್ದಂತೆ ಅಲ್ಲಿ ನೆರೆದಿದ್ದವರು ವಾಗ್ವಾದವನ್ನು ಶಮನಗೊಳಿಸಲು ಮುಂದಾಗಿದ್ದಾರೆ. ದಂಪತಿಗಳು ಮದುವೆಯಾದ ಕೆಲವೇ ಗಂಟೆಗಳಲ್ಲಿ ವರನು ಮದುವೆಯನ್ನು ಕೊನೆಗೊಳಿಸುತ್ತಿರುವುದಾಗಿ ಘೋಷಿಸುವುದರೊಂದಿಗೆ ಜಗಳ ಕೊನೆಗೊಂಡಿತು.
