ಉದಯವಾಹಿನಿ, ಬಿಗ್‌ಬಾಸ್ ಸೀಸನ್ 12 ಆರಂಭವಾಗಿ ಈಗಾಗಲೇ ಮೂರು ದಿನವಾಗಿದೆ. ಅಬ್ಬರದಿಂದ ಆರಂಭವಾದ ಕನ್ನಡ ಬಿಗ್‌ಬಾಸ್ ಸೀಸನ್ 12 ಮೊದಲ ದಿನವೇ ದೊಡ್ಡ ವಿವಾದಕ್ಕೆ ಸಿಲುಕಿದೆ. ಅಭಿಮಾನಿಗಳ ನೆಚ್ಚಿನ ಶೋ ಬಿಗ್‌ಬಾಸ್. ಈ ಶೋ ಆರಂಭವಾಗುತ್ತಿದ್ದಂತೆ, ಬಿಗ್‌ಬಾಸ್ ಮತ್ತೆ ಅನೇಕ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ, ಅಭಿಮಾನಿಗಳಲ್ಲಿ ಶುರುವಾಗುತ್ತೆ. ಈಗಾಗಲೇ ಬಿಗ್‌ಬಾಸ್‌ಗೆ 20 ಜನ ಗ್ರ್ಯಾಂಡ್ ಆಗಿ ಎಂಟ್ರಿಕೊಟ್ಟಿದ್ದರು. ಆದ್ರೆ ಮನೆಗೆ ಬಂದ ಮೊದಲ ದಿನವೇ ಬಿಗ್‌ಬಾಸ್ ಸ್ಪರ್ಧಿಗಳಿಗೆ ಎಲಿಮಿನೇಟ್ ಶಾಕ್ ನೀಡಿದ್ದರು. ಆದ್ರೆ ಈ ಎಲಿಮಿನೇಟ್‌ನಲ್ಲಿ ಹೊರ ಹೋಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಮಿಂಚಿದ್ದ, ಉಡುಪಿ ಮೂಲದ ರಕ್ಷಿತಾ ಶೆಟ್ಟಿ. ಬಿಗ್‌ಬಾಸ್ ಆರಂಭವಾದ ಮೊದಲ ದಿನದಲ್ಲೇ ಈ ನಿರ್ಧಾರವನ್ನು ಅಭಿಮಾನಿಗಳು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಾಪಾಸ್ ರಕ್ಷಿತಾ ಶೆಟ್ಟಿಯನ್ನ ಬಿಗ್‌ಬಾಸ್ ಮನೆಗೆ ಕರೆಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ಹೌದು, ಬಿಗ್‌ಬಾಸ್ ಮನೆಗೆ ಬಂದ ಒಂದೇ ದಿನದಲ್ಲಿ ಸೋಷಿಯಲ್ ಮೀಡಿಯಾ ಸ್ಟಾರ್ ರಕ್ಷಿತಾ ಶೆಟ್ಟಿ ಎಲಿಮಿನೇಟ್ ಮಾಡಿದ್ದಾರೆ. ಈ ಮೂಲಕ ಕರಾವಳಿ ಹುಡುಗಿ ರಕ್ಷಿತಾ ಶೆಟ್ಟಿಗೆ ಬಿಗ್‌ಬಾಸ್‌ಗೆ ಕರೆಸಿ ಅವಮಾನ ಮಾಡಿದ್ದಾರೆ ಎಂದು ಕೂಗು ಕೇಳಿಬರುತ್ತಿದೆ. ಬಂದ ದಿನವೇ ಎಲಿಮಿನೇಟ್ ಮಾಡೋದಾದ್ರೆ ಒಳಗೆ ಕರೆಸಿದ್ದು ಯಾಕೆ ಎಂದು ಅಭಿಮಾನಿಗಳು, ಪ್ರೇಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.
