ಉದಯವಾಹಿನಿ, ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಯಾಗಿರೋ ನಟ ದರ್ಶನ್ಗೆ ಜೈಲು ನಿತ್ಯ ನರಕವೇ ಆಗಿದೆ. ಕೋರ್ಟ್ ಸೂಚನೆ ಕೊಟ್ರು ನನಗೆ ಸೌಲಭ್ಯ ನೀಡ್ತಿಲ್ಲ ಎಂದು ಜೈಲಾಧಿಕಾರಿಗಳ ವಿರುದ್ಧ ದರ್ಶನ್ ಕೋರ್ಟ್ ಮೊರೆ ಹೋಗಿದ್ದಾರೆ. ಈ ಸಂಬಂಧ ಜೈಲಿನ ಸೂಪರಿಡೆಂಟ್ ಕೋರ್ಟ್ ಗೆ ರಿಪೋರ್ಟ್ ಸಲ್ಲಿಸಿದ್ದಾರೆ. 64ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಜೈಲಿನಲ್ಲಿ ಸರಿಯಾದ ಸೌಲಭ್ಯ ಕೊಡ್ತಿಲ್ಲ ಎಂದು ದರ್ಶನ್ ಪರ ವಕೀಲರು ಪ್ರಬಲ ವಾದ ಮಂಡಿಸಿದ್ದಾರೆ.
ಜೈಲಿನಲ್ಲಿ ಬಂಧಿಯಾಗಿರುವ ದರ್ಶನ್ಗೆ ಕನಿಷ್ಠ ಸೌಲಭ್ಯಗಳನ್ನ ಕೂಡ ಕೊಡ್ತಿಲ್ಲ ಎಂದು ನಟನ ಪರ ವಕೀರು ವಾದ ಮಂಡಿಸಿದ್ರು. ಜೈಲಿಗೆ ಎಷ್ಟು ವಿಐಪಿಗಳು ಹೋಗಿ ಬಂದ್ರು. ಅವ್ರಿಗೆಲ್ಲಾ ಇದೇ ರೀತಿ ಸೆಕ್ಯುರಿಟಿ ಕೊಡ್ತಿದ್ರಾ ಎಂದು ದರ್ಶನ್ ಪರ ವಕೀಲ ಸುನೀಲ್ ಪ್ರಶ್ನೆ ಮಾಡಿದ್ದಾರೆ.
ದರ್ಶನ್ಗೆ ನಾವು ಚಿನ್ನದ ಮಂಚ ಕೇಳಿದ್ವಾ…? ಇವ್ರು ಬರೀ ಲೋಟ, ತಟ್ಟೆ ಕೊಟ್ಟಿದ್ದಾರೆ. ದರ್ಶನ್ ಅವರಿಗೆ ಮಾತ್ರ ಯಾಕೆ ಇಷ್ಟೊಂದು ಸೆಕ್ಯೂರಿಟಿ. ನೋಡೋಣ ಸ್ವಾಮಿ ಎಷ್ಟು ದಿನ ಅದೇ ಸೆಲ್ ನಲ್ಲಿ ಇಡ್ತಾರೋ ಎಂದು ವಕೀಲರಾದ ಸುನೀಲ್ ಅಸಮಾಧಾನ ಮಾತುಗಳಾಡಿದ್ರು.
