ಉದಯವಾಹಿನಿ, ಬೆಂಗಳೂರು: ಇತ್ತೀಚೆಗೆ ನಗರದ ಬೂದಿಗೆರೆ ಕ್ರಾಸ್ ಬಳಿ ವಿದ್ಯಾರ್ಥಿನಿಯನ್ನು ಬಲಿ ಪಡೆದಿದ್ದ ಹಿಟ್‌ & ರನ್‌ ಪ್ರಕರಣದ ಆರೋಪಿಯನ್ನು ಆವಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಪಶ್ಚಿಮ ಬಂಗಾಳ ಮೂಲದ ಜೆರಾಲ್ಡ್ ಮಂಡಲ್ ಎಂದು ಗುರುತಿಸಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಟಿಪ್ಪರ್ ಪತ್ತೆ ಹಚ್ಚಿ ಚಾಲಕನನ್ನು ಬಂಧಿಸಿದ್ದಾರೆ.
ಅ.29ರ ಬೆಳಗ್ಗೆ 8:50 ಸುಮಾರಿಗೆ ಈ ಅಪಘಾತ ನಡೆದಿತ್ತು. ರಸ್ತೆ ಗುಂಡಿ ತಪ್ಪಿಸಲು ಹೋಗಿ ಸ್ಕಿಡ್ ಆಗಿ ವಿದ್ಯಾರ್ಥಿನಿ ಧನುಶ್ರೀ (21) ರಸ್ತೆಗೆ ಬಿದ್ದಿದ್ದಳು. ಈ ವೇಳೆ ಆಕೆಯ ಮೇಲೆ ಟಿಪ್ಪರ್‌ ಹರಿದಿತ್ತು. ಇದರಿಂದ ಯುವತಿ ಸಾವನ್ನಪ್ಪಿದ್ದಳು. ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿತ್ತು.

Leave a Reply

Your email address will not be published. Required fields are marked *

error: Content is protected !!