ಉದಯವಾಹಿನಿ, ಮುಂಬೈ: ಪಹಲ್ಗಾಮ್‌ ದಾಳಿ ನಂತರ ಭಾರತದ ನಿಜವಾದ ಸ್ನೇಹಿತ ಯಾರೆಂಬುದು ಗೊತ್ತಾಗಿದೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ. ಆರ್‌ಎಸ್‌ಎಸ್‌ ವಾರ್ಷಿಕ ವಿಜಯದಶಮಿ ರ‍್ಯಾಲಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಭದ್ರತ್ರೆ ಬಂದಾಗ ಭಾರತವು ಹೆಚ್ಚು ಜಾಗರೂಕವಾಗಿರಬೇಕು ಎಂದು ಸಲಹೆ ನೀಡಿದ್ದಾರೆ.
ನಾವು ಇತರ ದೇಶಗಳೊಂದಿಗೆ ಸ್ನೇಹಪರ ಸಂಬಂಧವನ್ನು ಕಾಪಾಡಿಕೊಂಡಿದ್ದರೂ, ನಾವು ಅದನ್ನು ಮುಂದುವರಿಸುತ್ತೇವೆ, ನಮ್ಮ ಭದ್ರತೆಗೆ ಬಂದಾಗ, ನಾವು ಹೆಚ್ಚು ಜಾಗರೂಕರಾಗಿರಬೇಕು. ಪಹಲ್ಗಮ್ ದಾಳಿಯ ನಂತರ, ವಿವಿಧ ದೇಶಗಳು ತೆಗೆದುಕೊಂಡ ನಿರ್ಣಯಗಳಿಂದ ಭಾರತದ ನಿಜವಾದ ಸ್ನೇಹಿತ ಯಾರೆಂಬುದು ಗೊತ್ತಾ ಗಿದೆ ಎಂದು ತಿಳಿಸಿದ್ದಾರೆ. ಭಯೋತ್ಪಾದಕರು ಗಡಿ ದಾಟಿ ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿ 26 ಭಾರತೀಯರನ್ನು ಹತ್ಯೆ ಮಾಡಿದರು. ಇದು ದೇಶದಲ್ಲಿ ಅಪಾರ ನೋವು ಮತ್ತು ಉಗ್ರರ ವಿರುದ್ಧ ಕೋಪಕ್ಕೆ ಕಾರಣವಾಯಿತು. ದಾಳಿಗೆ ತಕ್ಕ ಪ್ರತೀಕಾರವೂ ಆಯಿತು. ನಮ್ಮ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಸಮಾಜದ ಏಕತೆ ಇದರಿಂದ ಸ್ಪಷ್ಟವಾಯಿತು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!