ಉದಯವಾಹಿನಿ, ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 156ನೇ ಜನ್ಮ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಾಜ್‌ಘಾಟ್‌ಗೆ ತೆರಳಿ ಗಾಂಧಿಗೆ ಗೌರವ ನಮನ ಸಲ್ಲಿಸಿದರು. ನಾಡಹಬ್ಬ ದಸರಾ ಜೊತೆಗೆ ಗಾಂಧಿ ಜಯಂತಿ ಬಂದಿದೆ. ಇಂದು (ಅ.2) ಮಹಾತ್ಮ ಗಾಂಧೀಜಿ ಅವರ 156ನೇ ವರ್ಷದ ಜನ್ಮ ದಿನ. ಗಾಂಧಿ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಮೋದಿ, ಗಾಂಧಿ ಜಯಂತಿಯು ಪ್ರೀತಿಯ ಬಾಪು ಅವರ ಅಸಾಧಾರಣ ಜೀವನಕ್ಕೆ ಗೌರವ ಸಲ್ಲಿಸುವ ಬಗ್ಗೆ, ಅವರ ಆದರ್ಶಗಳು ಮಾನವ ಇತಿಹಾಸದ ಹಾದಿಯನ್ನು ಪರಿವರ್ತಿಸಿದವು. ಧೈರ್ಯ ಮತ್ತು ಸರಳತೆ ಹೇಗೆ ದೊಡ್ಡ ಬದಲಾವಣೆಯ ಸಾಧನಗಳಾಗಬಹುದು ಎಂಬುದನ್ನು ಅವರು ಪ್ರದರ್ಶಿಸಿದರು ಎಂದು ಸ್ಮರಿಸಿದ್ದಾರೆ.

ಜನರನ್ನು ಸಬಲೀಕರಣಗೊಳಿಸುವ ಅಗತ್ಯ ಸಾಧನವಾಗಿ ಸೇವೆ ಮತ್ತು ಕರುಣೆಯ ಶಕ್ತಿಯನ್ನು ಅವರು ನಂಬಿದ್ದರು. ವಿಕಸಿತ ಭಾರತವನ್ನು ನಿರ್ಮಿಸುವ ನಮ್ಮ ಅನ್ವೇಷಣೆಯಲ್ಲಿ ನಾವು ಅವರ ಮಾರ್ಗವನ್ನು ಅನುಸರಿಸುತ್ತೇವೆ ಎಂದು ಮೋದಿ ತಿಳಿಸಿದ್ದಾರೆ. ಇದೇ ದಿನ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನ ಕೂಡ. ಪ್ರಧಾನಿ ನರೇಂದ್ರ ಮೋದಿ ಅವರು ವಿಜಯ್ ಘಾಟ್‌ನಲ್ಲಿ ಶಾಸ್ತ್ರಿ ಅವರಿಗೆ ಗೌರವ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!