ಉದಯವಾಹಿನಿ, ಬೀಜಿಂಗ್‌: ಇತ್ತೀಚಿನ ದಿನದಲ್ಲಿ ಸ್ಮಾರ್ಟ್ ಫೋನ್ ಗ್ಯಾಜೆಟ್ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಐಫೋನ್ ಬ್ರ್ಯಾಂಡ್ ಎಂದರೆ ಕ್ರೇಝ್‌ ಸ್ವಲ್ಪ ಜಾಸ್ತಿ ಎಂದೇ ಹೇಳಬಹುದು. ಐಫೋನ್ ಹೊಸ ಹೊಸ ವರ್ಶನ್ ಬರುತ್ತಿದ್ದಂತೆ ಅದನ್ನು ಖರೀದಿಸಲು ಜನರು ಮುಗಿಬೀಳುತ್ತಾರೆ. ಇಂದು ಐಫೋನ್ ಖರೀದಿಗಾಗಿ ಲೋನ್ ಮಾಡುವುದು ಸಾಮಾನ್ಯವಾಗಿದೆ. ಇತ್ತೀಚೆಗಷ್ಟೇ ಪ್ರಿಯತಮೆಗಾಗಿ ಪ್ರೇಮಿ ಕಿಡ್ನಿ ಮಾರಿ ಐಫೋನ್ ಖರೀದಿ ಮಾಡಿದ್ದ ಸುದ್ದಿ ವೈರಲ್ ಆಗಿತ್ತು. ಅದರ ಬೆನ್ನಲ್ಲೆ ಇಂದಹದ್ದೇ ಘಟನೆಯೊಂದು ಚೀನಾದಲ್ಲಿ ಬೆಳಕಿಗೆ ಬಂದಿದೆ. ಚೀನಾದ ಯುವಕನೊಬ್ಬ ತನ್ನ 17 ವರ್ಷ ವಯಸ್ಸಿನಲ್ಲಿ ತನ್ನ ಒಂದು ಕಿಡ್ನಿಯನ್ನು (Sold A Kidney) ಬ್ಲ್ಯಾಕ್ ಮಾರ್ಕೆಟ್‌ನಲ್ಲಿ ಮಾರಾಟ ಮಾಡಿ ತನ್ನಿಷ್ಟದ ದುಬಾರಿ ಫೋನ್ ಖರೀದಿಸಿದ್ದ. ಆದರೆ ಇದೆ ನಿರ್ಧಾರದಿಂದ ಆತನೀಗ ಅಂಗವೈಕಲ್ಯಕ್ಕೆ ಒಳಗಾಗಿದ್ದಾನೆ.

ಚೀನಾ ಮೂಲದ ಯುವ ವಾಂಗ್ ಶಾಂಗ್ಕುನ್‌ಗೆ ಐಫೋನ್ ಖರೀದಿ ಮಾಡಬೇಕು ಎಂಬ ಆಸೆ ಇತ್ತು. ಆದರೆ ಅಷ್ಟು ಹಣ ಆತನ ಬಳಿ ಇರಲಿಲ್ಲ. ತೀರ ಬಡ ಕುಟುಂಬದ ಹಿನ್ನೆಲೆಯವನಾಗಿದ್ದ ಕಾರಣ ಆತನಿಗೆ ಸಾಲ ಕೂಡ ಯಾರು ನೀಡುವವರು ಇರಲಿಲ್ಲ. ಹೀಗಾಗಿ ಹೇಗಾದರೂ ಮಾಡಿ ಐಫೋನ್‌ ಖರೀದಿ ಮಾಡಬೇಕು ಎಂಬ ಕಾರಣಕ್ಕೆ ತನ್ನ ಕಿಡ್ನಿ ಮಾರಲು ಆತ ನಿರ್ಧರಿಸಿದ್ದನು. ಆದರೆ ಫೋನ್ ಖರೀದಿ ಮಾಡಿ ಹದಿನಾಲ್ಕು ವರ್ಷಗಳ ನಂತರ ಆತನನ್ನು ಅದುವೇ ಶಾಶ್ವತವಾಗಿ ಅಂಗವಿಕಲನನ್ನಾಗಿ ಮಾಡಿದೆ.

ಚೀನಾದ ವಾಂಗ್ ಶಾಂಗ್ಕುನ್‌ಗೆ ಐಫೋನ್ ಖರೀದಿ ಮಾಡಲು ಒಂದು ಕಿಡ್ನಿ ಮಾರಾಟ ಮಾಡಲು ವ್ಯಕ್ತಿಯೊಬ್ಬ ಸಲಹೆ ನೀಡಿದ್ದಾನೆ. ಒಂದು ಕಿಡ್ನಿಗೆ 20,000 ಯುವಾನ್ ಸಿಗುತ್ತದೆ ಎಂದು ವ್ಯಕ್ತಿ ಭರವಸೆ ನೀಡಿದ್ದಾನೆ. ಅದಕ್ಕೆ ಶಾಂಗ್ಕುನ್ ಕೂಡ ಒಪ್ಪಿಕೊಂಡು 2011ರಲ್ಲಿ ತನ್ನ ಒಂದು ಮೂತ್ರಪಿಂಡವನ್ನು 20,000 ಯುವಾನ್‌ಗೆ (ಸುಮಾರು 2.5 ಲಕ್ಷ ರೂ.) ಮಾರಿ ಐಫೋನ್ 4 ಮತ್ತು ಐಪ್ಯಾಡ್ 2 ಅನ್ನು ಖರೀದಿಸಿದ್ದಾನೆ. ಆದರೆ ಇದರಿಂದಾಗಿ ಮುಂದೆ ತಾನು ದೊಡ್ಡ ಅಪಾಯಕ್ಕೆ ಸಿಲುಕುತ್ತೇನೆ ಎಂಬ ಸಣ್ಣ ಅರಿವು ಆತನಿಗೆ ಇರಲಿಲ್ಲ.

Leave a Reply

Your email address will not be published. Required fields are marked *

error: Content is protected !!