ಉದಯವಾಹಿನಿ, ನ್ಯೂಯಾರ್ಕ್: ಮಹಿಳೆಯೊಬ್ಬಳ ಮೇಲೆ ಆಕೆಯ ಅಪಾರ್ಟ್‌ಮೆಂಟ್ ಒಳಗೆ ಹಲ್ಲೆ ಹಾಗೂ ಅತ್ಯಾಚಾರ ನಡೆಸಲಾದ ಭಯಾನಕ ಘಟನೆ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 28ರ ಮುಂಜಾನೆ, ನಿರಾಶ್ರಿತ ವ್ಯಕ್ತಿಯೊಬ್ಬ 36 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಅತ್ಯಾಚಾರ ಮಾಡದಂತೆ ತಡೆಯಲು ಎಷ್ಟು ಹಣ ಬೇಕಾಗುತ್ತದೆ ಎಂದು ಸಂತ್ರಸ್ತೆಯು ಆತನಲ್ಲಿ ಬೇಡಿಕೊಂಡಿದ್ದಾಳೆ.ನ್ಯೂಯಾರ್ಕ್ ಪೋಸ್ಟ್‌ನ ವರದಿಯ ಪ್ರಕಾರ, ನಾರ್ವುಡ್‌ನ ಪುಟ್ನಮ್ ಪ್ಲೇಸ್ ಬಳಿಯ ಈಸ್ಟ್ ಗನ್ ಹಿಲ್ ರಸ್ತೆಯಲ್ಲಿರುವ ವಸತಿ ಕಟ್ಟಡದೊಳಗೆ ಈ ದಾಳಿ ನಡೆದಿದೆ. ಆರೋಪಿಯನ್ನು 21 ವರ್ಷದ ಕೆನ್ನೆತ್ ಸಿರಿಬೋ ಎಂದು ಗುರುತಿಸಲಾಗಿದೆ. ಶಂಕಿತನು ಸ್ಥಳದಿಂದ ಪರಾರಿಯಾಗುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವರದಿಯ ಪ್ರಕಾರ, ಬೆಳಗ್ಗೆ 5 ಗಂಟೆ ಸುಮಾರಿಗೆ ಆರೋಪಿ ಕಟ್ಟಡಕ್ಕೆ ಪ್ರವೇಶಿಸಿ ಮಹಿಳೆಯ ಬಳಿ ಬಂದು ಅತ್ಯಾಚಾರ ಮಾಡಿದ್ದಾನೆ. ಒಂದು ಕೈಯಿಂದ ಆಕೆಯ ಬಾಯಿಯನ್ನು ಮುಚ್ಚಿ, ಇನ್ನೊಂದು ಕೈಯನ್ನು ಆಕೆಯ ಗಂಟಲಿನ ಮೇಲೆ ಒತ್ತಿ ಹಿಡಿದಿದ್ದಾನೆ. ನಂತರ ಮಹಿಳೆಯನ್ನು ನೆಲಕ್ಕೆ ಬೀಳಿಸಿದ್ದಾನೆ. ಅಲ್ಲಿ ಆರೋಪಿಯು ಆಕೆಗೆ ಪದೇ ಪದೇ ಹೊಡೆದಿದ್ದಾನೆ ಎನ್ನಲಾಗಿದೆ.
