ಉದಯವಾಹಿನಿ, 35 ವರ್ಷದ ಮಹಿಳೆಯನ್ನು 75 ವರ್ಷದ ವರನೊಬ್ಬ ಮದುವೆಯಾಗಿದ್ದಾನೆ. ಸಂಸಾರದ (Life) ಕನಸು (Dream) ಕಂಡಿದ್ದಾರೆ. ಆದರೆ ವಿಧಿಯಾಟವೇ ಬೇರೆ ಇತ್ತು. ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯ ಕುಚ್‌ಮುಚ್ ಗ್ರಾಮದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಇದನ್ನು ಕಂಡು ಇಡೀ ಪ್ರದೇಶ ಶಾಕ್ ಆಗಿದೆ. 75 ವರ್ಷದ ಸಂಗ್ರು ರಾಮ್ ಎಂಬಾತ 35 ವರ್ಷದ ಮಹಿಳೆ ಮನ್ಭವತಿ ಎಂಬುವವರನ್ನು ಮದುವೆಯಾಗಿದ್ದು, ಸುಖ ಸಂದಾರದ ಕನಸು ಕಂಡಿದ್ದರು. ಆದರೆ ಮದುವೆಯ ಮರುದಿನ ಬೆಳಿಗ್ಗೆಯೇ ನಿಧನರಾಗಿದ್ದಾರೆ.
ಈ ಅನಿರೀಕ್ಷಿತ ಸಾವು ಗ್ರಾಮದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ, ಸೋದರಳಿಯರು ಅಂತ್ಯಕ್ರಿಯೆಯನ್ನು ನಿಲ್ಲಿಸಿ ಪೊಲೀಸ್ ತನಿಖೆಗೆ ಒತ್ತಾಯಿಸಿದ್ದಾರೆ. ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾನೆ. ಇದೀಗ ಎಲ್ಲರ ಗಮನ ಪೊಲೀಸ್ ವರದಿ ಮತ್ತು ಮರಣೋತ್ತರ ಪರೀಕ್ಷೆಯತ್ತ ನೆಟ್ಟಿದೆ.
35 ವರ್ಷದ ಮಹಿಳೆಯನ್ನು ಮದುವೆಯಾದ ಅಜ್ಜ!: ಸಂಗ್ರು ರಾಮ್ ಎಂಬುವವರು ಒಂದು ವರ್ಷದ ಹಿಂದೆ ತಮ್ಮ ಮೊದಲ ಪತ್ನಿಯನ್ನು ಕಳೆದುಕೊಂಡಿದ್ದರು. ಮಕ್ಕಳಿಲ್ಲದೇ ಒಂಟಿಯಾಗಿ ಜಮೀನು ನಿರ್ವಹಣೆ ಮಾಡುತ್ತಿದ್ದ ಅವರು, ಕುಟುಂಬದ ಸಲಹೆಯನ್ನು ತಳ್ಳಿ ಮರುಮದುವೆಯ ನಿರ್ಧಾರ ಕೈಗೊಂಡರು. ಸೆಪ್ಟೆಂಬರ್ 29ರಂದು ಜಲಾಲ್‌ಪುರದ ನಿವಾಸಿಯಾದ ಮನ್ಭವತಿ ಅವರನ್ನು ವಿವಾಹ ಮಾಡಿಕೊಂಡರು. ಮೊದಲಿಗೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದು, ನಂತರ ದೇವಾಲಯದಲ್ಲಿ ಸಪ್ತಪದಿ ತುಳಿದಿದ್ದಾರೆ.
ಮದುವೆಯಾದ ಮಾರನೇ ದಿನವೇ ಸಾವು: ಮನ್ಭವತಿ ಪ್ರಕಾರ, ಸಂಗ್ರು ರಾಮ್, “ನೀನು ನನ್ನ ಮನೆಯನ್ನು ನೋಡಿಕೊ, ನಾನು ಮಕ್ಕಳನ್ನು ನೋಡಿಕೊಳ್ಳುತ್ತೇನೆ” ಎಂದು ಹೇಳಿದ್ದರು. ಇದು ಅವರಿಗೆ ಸಂತೋಷದ ಕ್ಷಣಗಳು ತಂದಿತು. ಆದರೆ ಮದುವೆಯ ರಾತ್ರಿ ಇಬ್ಬರು ಸ್ವಲ್ಪ ಸಮಯ ಕಳೆದಿದ್ದು, ಮರುದಿನ ಬೆಳಿಗ್ಗೆಯೇ ಸಂಗ್ರು ರಾಮ್ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೆ ವೈದ್ಯರು ಈಗಾಗಲೇ ಮೃತರಾಗಿದ್ದಾರೆ ಎಂದು ಘೋಷಿಸಿದರು. ಈ ಸುದ್ದು ಮನ್ಭವತಿ ಅವರಿಗೆ ದೊಡ್ಡ ಆಘಾತವಾಗಿದ್ದು, ಗ್ರಾಮದಲ್ಲಿ ಈ ಘಟನೆಯು ತ್ವರಿತವಾಗಿ ಹರಡಿತು, ಕೆಲವರು ಇದನ್ನು ವಿಧಿಯ ಆಟ ಎಂದು ಕರೆದರೆ, ಇನ್ನು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.
