ಉದಯವಾಹಿನಿ, ಬೆಂಗಳೂರು: ಜಿಬಿಎ ಚುನಾವಣೆಗೆ ಜೆಡಿಎಸ್ ಸಿದ್ಧತೆ ಶುರು ಮಾಡಿದೆ. ಚುನಾವಣೆ ಸಿದ್ಧತೆ ಹಿನ್ನಲೆಯಲ್ಲಿ ಅ.12ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಹಿಳಾ ಸಮಾವೇಶ ನಡೆಸೋದಕ್ಕೆ ಸಿದ್ಧತೆ ಮಾಡಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ತಿಳಿಸಿದ್ದಾರೆ. ಜೆಡಿಎಸ್ (JDS) ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮಾವೇಶದ ಬಗ್ಗೆ ಘೋಷಣೆ ಮಾಡಿದರು. ಬೆಂಗಳೂರಿನಲ್ಲಿ ಈ ಬಾರಿ 50-60 ಸೀಟು ಪಡೆರುವ ಸಿದ್ಧತೆ ಮಾಡಿದ್ದೇವೆ. ಹೀಗಾಗಿ ಅ.12ರಂದು 50 ಸಾವಿರ ಮಹಿಳೆಯರನ್ನ ಸೇರಿಸಿ ಸಮಾವೇಶ ಮಾಡ್ತೀವಿ ಎಂದಿದ್ದಾರೆ.
ಸಮಾವೇಶಕ್ಕೆ ಹಣಕಾಸಿನ ಅಡಚಣೆ ಇದ್ದರೆ ತಿಳಿಸಿ. ನಾನು ಸಂಪೂರ್ಣವಾಗಿ ಇದರ ಹೊಣೆ ಹೊರುತ್ತೇನೆ. ಆದರೆ ಸಮಾವೇಶ ಮಾಡದೇ ಹಿಂದೆ ಬೀಳಬಾರದು. ನಾನು ಪ್ರತಿದಿನ ಬೇಕಿದ್ದರೂ ಆಫೀಸ್‌ಗೆ ಬರುತ್ತೇನೆ. ಅ.12ಕ್ಕೆ ಒಂದು ಕಾರ್ಯಕ್ರಮ ಮಾಡಿ ನಮ್ಮ ಶಕ್ತಿ ಪ್ರದರ್ಶನ ಮಾಡೋಣ ಎಂದು ಪಕ್ಷದ ನಾಯಕರಿಗೆ ಕರೆ ಕೊಟ್ಟದ್ದಾರೆ.
