ಉದಯವಾಹಿನಿ, ಚಿಕ್ಕಮಗಳೂರು: ಶೃಂಗೇರಿ ಶಾರದಾಂಬಾ ದೇವಾಲಯದಲ್ಲಿ ಅದ್ದೂರಿ ರಥೋತ್ಸವ ನೆರವೇರಿದೆ. ಶೃಂಗೇರಿ ಕಿರಿಯ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಶಾರದಾಂಬೆ ರಥೋತ್ಸವ ಏಕಕಾಲದಲ್ಲಿ ನಡೆಯಿತು. ಈ ಮೂಲಕ ದಸರಾ ಮಹೋತ್ಸವ ಸಂಪನ್ನಗೊಂಡಿದೆ.
ರತ್ನಖಚಿತ ಕಿರೀಟ ಧರಿಸಿ, ರತ್ನಖಚಿತವಾದ ಅಡ್ಡಪಲ್ಲಕ್ಕಿಯಲ್ಲಿ ಶ್ರೀಗಳ ಮೆರವಣಿಗೆ ಮಾಡಲಾಯಿತು. 10 ದಿನಗಳಿಂದ ನಡೆಯುತ್ತಿದ್ದ ಉತ್ಸವ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವದೊಂದಿಗೆ ಸಂಪನ್ನಗೊಂಡಿತು. ರಥೋತ್ಸವ ಹಾಗೂ ಅಡ್ಡಪಲ್ಲಕ್ಕಿ ಉತ್ಸವ ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆಮೂಲೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ಶೃಂಗೇರಿ ಶಾರದಾಂಬಾ ಮಠದ ಆವರಣದಲ್ಲಿ ವಿಶೇಷ ಟ್ಯಾಬ್ಲೋಗಳನ್ನು ಸಹ ನಿರ್ಮಿಸಲಾಗಿತ್ತು. ಸುಂದರವಾದ ಟ್ಯಾಬ್ಲೋಗಳನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!