ಉದಯವಾಹಿನಿ, ನವದೆಹಲಿ: ರೈಲುಗಳ ಅಪಘಾತಕ್ಕೆ ಎರಡು ಇಲಾಖೆಯ ಸಿಬ್ಬಂದಿಯೇ ಕಾರಣವೆಂದು ತಿಳಿದುಬಂದಿದೆ. ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ರೈಲು ದುರಂತಕ್ಕೆ ಇಲಾಖೆ ಸಿಬ್ಬಂದಿಯ ಎಡವಟ್ಟೇ ಕಾರಣವೆಂದು ರೈಲ್ವೆ ಸುರಕ್ಷಿತ ಆಯುಕ್ತರು ವರದಿ ನೀಡಿದ್ದಾರೆ. ಈ ದೊಡ್ಡ ಲೋಪಕ್ಕೆ ರೈಲ್ವೆಯ ಸಿಗ್ನಲ್ ಮತ್ತು ಕಾರ್ಯನಿರ್ವಹಣೆ ಸಿಬ್ಬಂದಿ ಕಾರಣವೆಂದು ರೈಲ್ವೆ ಆಯುಕ್ತರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ಅಯೋಧದ ಮರ್ಯಾದಾ ಪುರುಷೋತ್ತಮ ಶ್ರೀ ರಾಮ್ ವಿಮಾನ ನಿಲ್ದಾಣದ ನಿರ್ಮಾಣ ಸೆಪ್ಟೆಂಬರ್ ವೇಳೆಗೆ ಪೂರ್ಣ ಸಿಬಿಐನಿಂದಲೂ ದುರಂತದ ತನಿಖೆ ನಡೆದಿದೆ. ರೈಲು ದುರಂತದ ಬಗ್ಗೆ ಸಿಬಿಐನಿಂದಲೂ ತನಿಖೆ ಮುಂದುವರೆದಿದೆ. ರೈಲು ದುರಂತದ ಹಿಂದೆ ವಿಧ್ವಂಸಕ ಕೃತ್ಯದ ಶಂಕೆಯಿರುವ ಹಿನ್ನೆಲೆ ಸಿಬಿಐ ತನಿಖೆ ಕೈಗೊಂಡಿದೆ.
ಜೂನ್ 2ರಂದು ಸಂಭವಿಸಿದ ತ್ರಿವಳಿ ರೈಲು ಅಪಘಾತಕ್ಕೆ ಮಾನವ ತಪ್ಪು ಕಾರಣವೆಂದು ರೈಲ್ವೆ ಸುರಕ್ಷತಾ ಆಯುಕ್ತರು(CRS) ತಿಳಿಸಿದ್ದಾರೆ. ಕೇಂದ್ರೀಯ ತನಿಖಾ ದಳ (ಸಿಬಿಐ) ನಡೆಸುತ್ತಿರುವ ಸಮಾನಾಂತರ ತನಿಖೆಯ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳಲು ಮುಚ್ಚಿಟ್ಟಿರುವ ವರದಿಯಲ್ಲಿ ತೋರಿಸಿರುವ ದೋಷಗಳ ಕುರಿತು ಯಾವುದೇ ವಿವರ ಬಹಿರಂಗಪಡಿಸದಿರಲು ಅಧಿಕಾರಿಗಳು ನಿರಾಕರಿಸಿದ್ದಾರೆ.
