ಉದಯವಾಹಿನಿ, ನವದೆಹಲಿ: ದೇಶದ ಪ್ರಮುಖ ಬ್ಯಾಂಕ್’ಗಳಲ್ಲಿ ಒಂದಾಗಿ ಮುಂದುವರಿದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಹೊಚ್ಚ ಹೊಸ ಯೋನೋ ಅಪ್ಲಿಕೇಶನ್ ಅನಾವರಣಗೊಳಿಸಿದ್ದು, YONO FOR EVERY INDIAN ಎಂಬ ಹೊಸ ಡಿಜಿಟಲ್ ಅಪ್ಲಿಕೇಶನ್ ಇದಾಗಿದೆ. ಬ್ಯಾಂಕ್‌ನ ಇತ್ತೀಚಿನ ನಿರ್ಧಾರದೊಂದಿಗೆ, ಯೋನೋ ಅಪ್ಲಿಕೇಶನ್‌ನಲ್ಲಿ ಇನ್ನಷ್ಟು ಹೊಸ ವೈಶಿಷ್ಟ್ಯಗಳು ಲಭ್ಯವಿರುತ್ತವೆ. ಯೋನೋ ಎಂದರೆ ಯೂ ನೀಡ್ ಒನ್ಲಿ ಒನ್. ಗ್ರಾಹಕರು ಈಗ ಯೋನೋ ಅಪ್ಲಿಕೇಶನ್’ನಲ್ಲಿಯೂ UPI ಸೇವೆಗಳನ್ನ ಪಡೆಯಬಹುದು. ಸ್ಕ್ಯಾನ್ ಮತ್ತು ಪೇ, ಕಾಂಟ್ಯಾಕ್ಟ್ ಮೂಲಕ ಪಾವತಿ, ಹಣ ವಿನಂತಿ ಮುಂತಾದ ಸೇವೆಗಳು ಲಭ್ಯವಿರುತ್ತವೆ. 2017ರಲ್ಲಿ, SBI ಯೋನೋ ಅಪ್ಲಿಕೇಶನ್ ಪರಿಚಯಿಸಿತು.
ಅಂದಿನಿಂದ ಇಂದಿನವರೆಗೆ 6 ಕೋಟಿಗೂ ಹೆಚ್ಚು ಮಂದಿ ಯೋನೋ ಆಪ್ ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಯೋನೋ ಆಪ್ ಮೂಲಕವೇ ಕಳೆದ ಹಣಕಾಸು ವರ್ಷದಲ್ಲಿ 78.6 ಲಕ್ಷ ರೂಪಾಯಿ ಉಳಿತಾಯ ಖಾತೆಗಳನ್ನ ತೆರೆಯಲಾಗಿದೆ. ಯೋನೋ ಅಪ್ಲಿಕೇಶನ್‌ನ ನವೀಕರಿಸಿದ ಆವೃತ್ತಿಯು ಗ್ರಾಹಕರಿಗೆ ಹೆಚ್ಚಿನ ವೈಶಿಷ್ಟ್ಯಗಳನ್ನ ತರುತ್ತದೆ. ಇತರೆ ಬ್ಯಾಂಕ್‌ಗಳ ಗ್ರಾಹಕರು ಕೂಡ ಯೋನೋ ಆಪ್ ಮೂಲಕ ಸೇವೆಗಳನ್ನ ಪಡೆಯಬಹುದು.
