ಉದಯವಾಹಿನಿ, ಹೊಸದಿಲ್ಲಿ: ಟೀಮ್ ಇಂಡಿಯಾದ ಮಾಜಿ ನಾಯಕ ಕನ್ನಡಿಗ ರಾಹುಲ್ ದ್ರಾವಿಡ್ ಅವರ ಕಾರ್ಯಕ್ಷಮತೆಯನ್ನು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಪ್ರಶಂಸಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ರಾಹುಲ್ ದ್ರಾವಿಡ್ ಅವರ ವೈಯಕ್ತಿಕ ಜೀವನ, ಆಟದ ಕೌಶಲ್ಯತೆ ಹಾಗೂ ಕಾರ್ಯಕ್ಷಮತೆಯು ನನಗೆ ತುಂಬಾ ಮೆಚ್ಚುಗೆಯಾಗಿದ್ದು , ಅವರು ನಾನು ಇಷ್ಟಪಡುವ ಕ್ರಿಕೆಟಿಗರಾಗಿದ್ದಾರೆ ಎಂದು ಗುಣಗಾಣ ಮಾಡಿದ್ದಾರೆ. ಬಿಸಿಸಿಯ ಟಿಎಂಎಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ರಿಷಿ ಸುನಕ್ ಅವರು ಈಗ ಟೀಮ್ ಇಂಡಿಯಾದ ಮುಖ್ಯ ತರಬೇತುದಾರರಾಗಿದ್ದು, ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಲಾಡ್ರ್ಸ್ ನಂತಹ ಪಿಚ್‍ಗಳಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‍ನ ವೇಗಿಗಳು ಎಸೆಯುತ್ತಿದ್ದ ಬೌನ್ಸರ್‍ಗಳಿಗೆ ತಕ್ಕ ಉತ್ತರ ನೀಡಿ ರನ್‍ಗಳನ್ನು ಕಲೆ ಹಾಕುತ್ತಿದ್ದ ಅವರ ಕೌಶಲ್ಯತೆಯು ನನಗೆ ತುಂಬಾ ಇಷ್ಟವಾಗುತ್ತಿತ್ತು. ಆದ್ದರಿಂದ ಅವರೇ ನಾನು ಮೆಚ್ಚುವ ಕ್ರಿಕೆಟಿಗರಾಗಿದ್ದಾರೆ ಎಂದು ರಿಷಿ ಸುನಕ್ ಹೇಳಿದ್ದಾರೆ.
