ಉದಯವಾಹಿನಿ, ದೆಹಲಿ: ಮಕ್ಕಳು ಮತ್ತು ಪ್ರಾಣಿಗಳ ನಡುವಿನ ಬಾಂಧವ್ಯವನ್ನು ನೋಡುವುದೇ ಕಣ್ಣಿಗೆ ಹಬ್ಬ. ಸಾಮಾಜಿಕ ಮಾಧ್ಯಮದಲ್ಲಿ ಇದೀಗ ವೈರಲ್ ಆಗಿರುವ ವಿಡಿಯೊವೊಂದು ನೆಟ್ಟಿಗರ ಹೃದಯಗೆದ್ದಿದೆ. ವಿಡಿಯೊದಲ್ಲಿ, ಪುಟ್ಟ ಹುಡುಗಿಯೊಬ್ಬಳು ಆನೆಗೆ ನಮಸ್ಕರಿಸುವುದನ್ನು ತೋರಿಸಲಾಗಿದೆ. ಪ್ರತಿಯಾಗಿ, ದೈತ್ಯ ಪ್ರಾಣಿಯು ತನ್ನ ಸೊಂಡಿಲಿನಿಂದ ಅವಳಿಗೆ ಆಶೀರ್ವದಿಸುತ್ತದೆ.
ವಿಡಿಯೊವು, ಬಾಲಕಿಯು ಆನೆಯ ಕಡೆಗೆ ನಡೆದು ಬರುವುದರೊಂದಿಗೆ ಪ್ರಾರಂಭವಾಗುತ್ತದೆ. ಅವಳು ಆನೆ ಮಾವುತನಿಗೆ ಹಣವನ್ನು ನೀಡಿ, ಆನೆಯತ್ತ ನೋಡಿ ತಲೆ ಬಾಗಿಸಿದ್ದಾಳೆ. ಸೌಮ್ಯ ಪ್ರಾಣಿಯಾದ ಆನೆಯು ತನ್ನ ಸೊಂಡಿಲನ್ನು ಎತ್ತಿ ಅವಳಿಗೆ ಆಶೀರ್ವದಿಸಿದೆ. ಆರಂಭದಲ್ಲಿ ಆಶ್ಚರ್ಯಚಕಿತಳಾದ ಬಾಲಕಿ, ನಂತರ ಒಂದು ಹೆಜ್ಜೆ ಮುಂದಿಡುತ್ತಾಳೆ. ಆನೆ ತನ್ನ ಸೊಂಡಿಲನ್ನು ತಲೆಯಾಡಿಸಿ ಬಾಲೆಯನ್ನು ಆಶೀರ್ವದಿಸುತ್ತದೆ.
ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬೆನ್ನಲ್ಲೇ, ಬಳಕೆದಾರರು ಕಾಮೆಂಟ್‌ಗಳ ವಿಭಾಗದಲ್ಲಿ ಸಿಹಿ ಸಂದೇಶಗಳೊಂದಿಗೆ ಪ್ರತಿಕ್ರಿಯಿಸಿದರು. ಹಲವಾರು ಬಳಕೆದಾರರು ಹೃದಯದ ಎಮೋಜಿಗಳನ್ನು ಹಾಕಿ, ಬಹಳ ಸುಂದರ ದೃಶ್ಯ ಎಂದು ಉದ್ಘರಿಸಿದ್ದಾರೆ. ಕೆಲವು ಕಾಮೆಂಟ್‌ಗಳು ಮಗುವಿನ ಪೋಷಕರು ಮತ್ತು ಆಕೆಯ ಪಾಲನೆಯನ್ನು ಹೊಗಳಿವೆ.

Leave a Reply

Your email address will not be published. Required fields are marked *

error: Content is protected !!