ಉದಯವಾಹಿನಿ : ಭಾರತೀಯ ಕ್ರಿಕೆಟ್‌ಗ ದಿಗ್ಗಜ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ (Rohit Sharma) ಅವರು 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಬೇಕೆಂದರೆ ಅವರು ದೇಶಿ ಕ್ರಿಕೆಟ್‌ನಲ್ಲಿ ಆಡಬೇಕು, ಆ ಮೂಲಕ ಅವರು ಆಟದಲ್ಲಿ ಸಕ್ರಿಯರಾಗಿರಬೇಕು ಎಂದು ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಅವರು ಸಲಹೆ ನೀಡಿದ್ದಾರೆ. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಈಗಾಗಲೇ ಟಿ20ಐ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಎದುರು ನೋಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇವರಿಬ್ಬರಿಗೂ ಗೇಮ್ ಟೈಮ್ ತುಂಬಾ ಮುಖ್ಯ ಎಂದು ಪಠಾಣ್ ಪ್ರತಿಪಾಧಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ದದ 3 ಪಂದ್ಯಗಳ ಏಕದಿನ ಸರಣಿ ಹಾಗೂ ಐದು ಪಂದ್ಯಗಳ ಟಿ20ಐ ಸರಣಿಗಳಿಗೆ ಅಕ್ಟೋಬರ್ 4 ರಂದು ಬಿಸಿಸಿಐ ಭಾರತ ತಂಡಗಳನ್ನು ಆಯ್ಕೆ ಮಾಡಿವೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರು ಭಾರತ ತಂಡಕ್ಕೆ ಮರಳಿದ್ದಾರೆ. ಆದರೆ, ಶುಭಮನ್ ಗಿಲ್ ಒಡಿಐ ತಂಡದ ನಾಯಕನಾಗುವ ಮೂಲಕ ರೋಹಿತ್ ಶರ್ಮಾ ಅವರ ಸ್ಥಾನವನ್ನು ತುಂಬಿದ್ದಾರೆ. ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ಮೂಲಕ ಬಿಸಿಸಿಐ ಅಚ್ಚರಿ ಮೂಡಿಸಿದೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೊದಲ್ಲಿ ಮಾತನಾಡಿದ, “ರೋಹಿತ್ ಶರ್ಮಾ ಅವರು ಫಿಟ್‌ನೆಸ್ ಮೇಲೆ ತುಂಬಾ ಕೆಲಸ ಮಾಡಿದ್ದಾರೆ. ಅವರು ಅದರ ಕಡೆಗೆ ತುಂಬಾ ಗಮನ ನೀಡುತ್ತಿದ್ದಾರೆ. ಆದರೆ, ನಿಯಮಿತವಾಗಿ ಫಿಟ್‌ನೆಸ್ ಇರಬೇಕು, ಪಂದ್ಯದ ವೇಳೆಯೂ ಫಿಟ್‌ನೆಸ್ ಅನ್ನು ಕಾಯ್ದುಕೊಳ್ಳಬೇಕಾಗುತ್ತದೆ. ನೀವು ನಿಯಮಿತವಾಗಿ ಕ್ರಿಕೆಟ್ ಆಡುತ್ತಿಲ್ಲವಾದರೆ, ನಿಮಗೆ ಗೇಮ್ ಟೈಮ್ ಅಗತ್ಯವಿದೆ. ಹಾಗಾಗಿ, ಅವರು ದೇಶಿ ಕ್ರಿಕೆಟ್‌ನಲ್ಲಿ ಆಡಬೇಕು,” ಎಂದು ಸೂಚನೆ ನೀಡಿದ್ದಾರೆ.
