ಉದಯವಾಹಿನಿ, ಸತತ ಸೋಲುಗಳಿಂದ ಕಂಗೆಟ್ಟಿರುವ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಮಹತ್ವದ ಬದಲಾವಣೆಗೆ ಪಿಸಿಬಿ ಮುಂದಾಗಿದೆ. ಇತ್ತೀಚೆಗಷ್ಟೇ ಮುಗಿದ ಏಷ್ಯಾಕಪ್‌ನಲ್ಲಿ ಭಾರತದ ವಿರುದ್ಧ ಆಡಿದ್ದ ಮೂರು ಪಂದ್ಯಗಳಲ್ಲಿ ಸೋತಿದ್ದ ಪಾಕಿಸ್ತಾನ ತಂಡ ಮುಜುಗರಕ್ಕೆ ಒಳಗಾಗಿತ್ತು. ಇದೀಗ ಪಾಕಿಸ್ತಾನ, ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲು ಸಜ್ಜಾಗಿದೆ. ಈ ಸರಣಿಗೆ ಇತ್ತೀಚೆಗೆ ಪಾಕ್ ತಂಡವನ್ನು ಸಹ ಘೋಷಿಸಲಾಗಿದೆ. ಈ ನಡುವೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಈ ಸರಣಿಗೆ 12 ಅನುಭವಿಗಳನ್ನು ತಂಡಕ್ಕೆ ಸೇರಿಸಿಕೊಂಡಿದ್ದು, ಅವರು ವಿವಿಧ ಪಾತ್ರಗಳನ್ನು ನಿರ್ವಹಿಸಲಿದ್ದಾರೆ.
ಪಾಕ್ ತಂಡಕ್ಕೆ 12 ಅನುಭವಿಗಳ ಸೇರ್ಪಡೆ: ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟೆಸ್ಟ್ ಸರಣಿಗೆ ಹೊಸ ಕೋಚಿಂಗ್ ಸಿಬ್ಬಂದಿಯನ್ನು ಘೋಷಿಸಿದೆ. ವಿಶೇಷವಾಗಿ 2025-27ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅನ್ನು ಉತ್ತಮ ರೀತಿಯಲು ಪ್ರಾರಂಭಿಸಲು ತಯಾರಿ ನಡೆಸುತ್ತಿರುವ ಪಾಕ್ ಮಂಡಳಿ, ಮಾಜಿ ಆಲ್‌ರೌಂಡರ್ ಅಜರ್ ಮಹಮೂದ್ ಅವರನ್ನು ರೆಡ್ -ಬಾಲ್ ತಂಡದ ಮುಖ್ಯ ಕೋಚ್ ಆಗಿ ನೇಮಿಸಿದೆ. ಹಾಗೆಯೇ ಮಾಜಿ ಸ್ಪಿನ್ನರ್ ಅಬ್ದುಲ್ ರೆಹಮಾನ್ ಈಗ ಸ್ಪಿನ್ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸಲಿದ್ದಾರೆ. ಅಬ್ದುಲ್ ಮಜೀದ್ ಅವರನ್ನು ಫೀಲ್ಡಿಂಗ್ ಕೋಚ್ ಆಗಿ ನೇಮಿಸಲಾಗಿದೆ. ಇವರಲ್ಲದೆ, ಮಾಜಿ ಓಪನರ್ ಇಮ್ರಾನ್ ಫರ್ಹತ್ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಿಸಲಾಗಿದೆ.
ತಂಡದ ನಿರ್ವಹಣೆಯ ವ್ಯವಸ್ಥಾಪಕರಾಗಿ ನವೇದ್ ಅಕ್ರಮ್ ಚೀಮಾ, ಫಿಸಿಯೋ ಆಗಿ ಕ್ಲಿಫ್ ಡೀಕನ್, ಕಾರ್ಯಕ್ಷಮತೆ ವಿಶ್ಲೇಷಕರಾಗಿ ತಲ್ಹಾ ಬಟ್, ಕಂಡೀಷನಿಂಗ್ ತರಬೇತುದಾರರಾಗಿ ಗ್ರಾಂಟ್ ಲುಡೆನ್, ಮಾಧ್ಯಮ ವ್ಯವಸ್ಥಾಪಕರಾಗಿ ಸಯ್ಯದ್ ನಯೀಮ್ ಗಿಲಾನಿ, ಭದ್ರತಾ ವ್ಯವಸ್ಥಾಪಕರಾಗಿ ಇರ್ತಾಜಾ ಕೊಮೈಲ್, ತಂಡದ ವೈದ್ಯರಾಗಿ ಡಾ. ವಾಜಿದ್ ಅಲಿ ರಫೈ ಮತ್ತು ಮೊಹಮ್ಮದ್ ಎಹ್ಸಾನ್ ನೇಮಕಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!