ಉದಯವಾಹಿನಿ, ಲಕ್ನೋ: ಉತ್ತರ ಪ್ರದೇಶದ ಫರೂಕಾಬಾದ್‌ನ ವಾಯುನೆಲೆಯಿಂದ ಭೋಪಾಲ್‌ಗೆ ಹೊರಟಿದ್ದ ಖಾಸಗಿ ಜೆಟ್ ವಿಮಾನವು ರನ್‌ವೇಯಿಂದ ಟೇಕಾಫ್‌ ಆದ ಕೆಲವೇ ಸೆಕೆಂಡುಗಳಲ್ಲಿ ಸ್ಕಿಡ್‌ ಆಗಿ ಹುಲ್ಲಿನ ಮೇಲೆ ಬಿದ್ದ ಘಟನೆ ನಡೆದಿದೆ.
ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಖಾಸಗಿ ಆಹಾರ ಸಂಸ್ಕರಣಾ ಕಂಪನಿಯ ಉನ್ನತ ಸದಸ್ಯರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ಘಟನೆ ಮೊಹಮ್ಮದಾಬಾದ್ ವಾಯುನೆಲೆಯಲ್ಲಿ ನಡೆದಿದೆ. ಅವಘಡ ಸಂಬಂಧ ವಿವರವಾದ ತನಿಖೆ ನಡೆಯುತ್ತಿದೆ. ವಿಮಾನದ ಟೈರ್‌ಗಳಲ್ಲಿ ಕಡಿಮೆ ಗಾಳಿಯ ಒತ್ತಡವು ಘಟನೆಗೆ ಕಾರಣವಾಗಿರಬಹುದು ಎನ್ನಲಾಗಿದೆ.ವುಡ್‌ಪೆಕರ್ ಗ್ರೀನ್‌ಗ್ರಿ ನ್ಯೂಟ್ರಿಯಂಟ್ಸ್ ಪ್ರೈವೇಟ್ ಲಿಮಿಟೆಡ್‌ನ ಸದಸ್ಯರು, ಉಪ ವ್ಯವಸ್ಥಾಪಕ ನಿರ್ದೇಶಕ ಅಜಯ್ ಅರೋರಾ, ಎಸ್‌ಬಿಐ ಮುಖ್ಯಸ್ಥ ಸುಮಿತ್ ಶರ್ಮಾ, ಬಿಪಿಒ ರಾಕೇಶ್ ಟಿಕು – ಕ್ಯಾಪ್ಟನ್ ನಸೀಬ್ ಬಮಲ್ ಮತ್ತು ಕ್ಯಾಪ್ಟನ್ ಪ್ರತೀಕ್ ಫರ್ನಾಂಡಿಸ್ ಜೆಟ್‌ನಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!