ಉದಯವಾಹಿನಿ, ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಜಾಲಿವುಡ್ ಸ್ಟುಡಿಯೋಗೆ ಬೀಗ ಜಡಿದ ಪರಿಣಾಮ ಬಿಗ್‌ಬಾಸ್ ಸ್ಪರ್ಧಿಗಳನ್ನ ಅಲ್ಲಿಂದ ಸ್ಥಳಾಂತರಗೊಳಿಸಿ ಚಿತ್ರೀಕರಣಕ್ಕೆ ಫುಲ್‌ಸ್ಟಾಪ್ ಇಡಲಾಗಿತ್ತು. ಬಳಿಕ ಸಮಸ್ಯೆ ಬಗೆಹರಿಸುವಂತೆ ಸೂಚಿಸಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂದೇಶ ಕಳುಹಿಸಿದ ಬಳಿಕ ರಾತ್ರೋರಾತ್ರಿ ಬಿಗ್‌ಬಾಸ್ ಮನೆಗೆ ಸ್ಪರ್ಧಿಗಳನ್ನ ವಾಪಸ್ ಕರೆದುಕೊಂಡು ಬರಲಾಯಿತು. ಈ ದೃಶ್ಯ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಪ್ರಸಾರವಾಗುವ ಸಂಭವ ಇದೆ. ಆ ಕುರಿತು ಪ್ರೋಮೋ ರಿಲೀಸ್ ಮಾಡಿದೆ ಟೀಂ.
17 ಸ್ಪರ್ಧಿಗಳನ್ನೊಳಗೊಂಡ ಬಿಗ್‌ಬಾಸ್ ಮನೆಯ ಮುಖ್ಯದ್ವಾರ ತೆರೆದು ಎಲ್ಲರೂ ಮನೆಗೆ ಎಂಟ್ರಿ ಕೊಡ್ತಿರುವ ವೀಡಿಯೋ ಇದೀಗ ರಿಲೀಸ್ ಆಗಿದೆ. ಒಟ್ಟು 17 ಸ್ಪರ್ಧಿಗಳನ್ನ ಬಿಗ್‌ಬಾಸ್ ಹೌಸ್ ಹತ್ತಿರದ ಈಗಲ್‌ಟನ್ ರೆಸಾರ್ಟ್ಗೆ ಶಿಫ್ಟ್ ಮಾಡಲಾಗಿತ್ತು. ಅಲ್ಲಿ ಮಂಗಳವಾರ ರಾತ್ರಿ 7 ಗಂಟೆಯಿಂದ ಗುರುವಾರದವರೆಗೂ ಇದ್ದ ಸ್ಪರ್ಧಿಗಳು ರಾತ್ರೋರಾತ್ರಿ ಮತ್ತೆ ಬಿಗ್‌ಬಾಸ್ ಹೌಸ್‌ಗೆ ವಾಪಸ್ಸಾಗಿದ್ದಾರೆ. ಹೀಗೆ ವಾಪಸ್ಸಾದ ಸ್ಪರ್ಧಿಗಳನ್ನ ವೆಲ್‌ಕಮ್ ಬ್ಯಾಕ್ ಎಂದು ಹೇಳಿ ಬಿಗ್‌ಬಾಸ್ ಸ್ಪಾಗತಿಸುವ ದೃಶ್ಯವನ್ನ ವಾಹಿನಿಯು ಪ್ರೊಮೋದಲ್ಲಿ ತೋರಿಸಿದೆ. ಹೀಗೆ ರಾತ್ರೋರಾತ್ರಿ ಎಲ್ಲಾ ಸ್ಪರ್ಧಿಗಳು ಮತ್ತೆ ಬಿಗ್ ಮನೆಗೆ ಆಗಮಿಸಿದ್ದು, ಅಲ್ಪವಿರಾಮ ಪಡೆದಿದ್ದ ದೊಡ್ಮನೆಯ ಆಟ ಮತ್ತೆ ಶುರುವಾಗಿದೆ.

Leave a Reply

Your email address will not be published. Required fields are marked *

error: Content is protected !!