ಉದಯವಾಹಿನಿ, ನೋಟು ಅಮಾನ್ಯೀಕರಣದಿಂದಾಗಿ ತಮ್ಮ ವ್ಯವಹಾರವು ಭಾರೀ ನಷ್ಟ ಅನುಭವಿಸಿದೆ. ಅಮಾನ್ಯೀಕರಣದಿಂದಾಗಿಯೇ ಸಾಲ ಪಾವತಿಸಲು ಆಗಿರಲಿಲ್ಲ ಎಂದು ಅಂತ 60 ಕೋಟಿ ವಂಚನೆ ಪ್ರಕರಣದಲ್ಲಿ ತನಿಖೆ ಎದುರಿಸ್ತಿರುವ ಶಿಲ್ಪಾ ಶೆಟ್ಟಿ ಪತಿ ರಾಜ್‌ಕುಂದ್ರಾ ಹೇಳಿದ್ದಾರೆ. ತಮ್ಮ ಕಂಪನಿಯು ವಿದ್ಯುತ್ ಮತ್ತು ಗೃಹೋಪಯೋಗಿ ಉಪಕರಣಗಳಲ್ಲಿ ವ್ಯಾಪಾರ ಮಾಡುತ್ತಿತ್ತು. 2016ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ನೋಟು ರದ್ದತಿಯ ನಂತರ ಕಂಪನಿಯು ಬಹಳಷ್ಟು ನಷ್ಟ ಎದುರಿಸಿದೆ. ಕಂಪನಿ ಪಡೆದ ಸಾಲವನ್ನ ಮರುಪಾವತಿಸಲು ಸಾಧ್ಯವಾಗಿಲ್ಲ.ಸಾಲ ಮತ್ತು ಹೂಡಿಕೆ ಒಪ್ಪಂದದಲ್ಲಿ ಉದ್ಯಮಿ ದೀಪಕ್ ಕೊಠಾರಿ ಅನ್ನೋವ್ರಿಗೆ 60 ಕೋಟಿ ರೂ. ವಂಚಿಸಿರುವ ಕೇಸಲ್ಲಿ ಈಗಾಗಲೇ 2 ಬಾರಿ ವಿಚಾರಣೆಗೆ ಒಳಪಡಿಸಲಾಗಿದ್ದು, ಮತ್ತೆ ಸಮನ್ಸ್ ಜಾರಿ ಮಾಡುವ ಸಾಧ್ಯತೆ ಇದೆ. ಅಂದಹಾಗೆ, ಪತಿ ಕಂಪನಿಯ ಯಾವ ವ್ಯವಹಾರವನ್ನೂ ನಾನು ನೋಡಿಕೊಳ್ಳುತ್ತಿರಲಿಲ್ಲ ಎಂದು ಶಿಲ್ಪಾ ಶೆಟ್ಟಿ ವಿಚಾರಣೆಯಲ್ಲಿ ಹೇಳಿಕೊಂಡಿದ್ದಾರೆ. 60 ಕೋಟಿ ವಂಚನೆ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ, ಪತಿ ರಾಜ್ ಕುಂದ್ರಾಗೆ ಭಾರಿ ಹಿನ್ನಡೆಯಾಗಿತ್ತು. ಅಮೆರಿಕದ ಲಾಸ್ ಏಂಜಲೀಸ್ ಸೇರಿದಂತೆ ಇತರ ದೇಶಗಳ ಪ್ರವಾಸಕ್ಕೆ ತೆರಳಲು ಮುಂದಾಗಿದ್ದ ಶಿಲ್ಪಾ ಶೆಟ್ಟಿ ದಂಪತಿಗೆ ಬಾಂಬೆ ಹೈಕೋರ್ಟ್ ಇತ್ತೀಚೆಗೆ ತಡೆ ನೀಡಿದೆ. ಕಾರ್ಯಕ್ರಮ ನಿಮಿತ್ತ ಲಾಸ್ ಎಂಜಲೀಸ್ (Los Angeles) ಮತ್ತು ಇತರ ದೇಶಗಳಿಗೆ ತೆರಳಬೇಕಿತ್ತು. ಹೀಗಾಗಿ ಬಾಂಬೆ ಹೈಕೋರ್ಟ್, ಲಾಸ್ ಏಂಜಲೀಸ್ ಮತ್ತು ಇತರ ವಿದೇಶಗಳಿಗೆ ಪ್ರಯಾಣಿಸಲು ಬಯಸಿದರೆ ಮೊದಲು 60 ಕೋಟಿ ರೂಪಾಯಿ ಡೆಪಾಸಿಟ್ ಇಡಿ ಎಂದು ಹೇಳಿತ್ತು.
