ಉದಯವಾಹಿನಿ, ಮುಂಬಯಿ: ಮುಂಬೈ ವಿಮಾನ ನಿಲ್ದಾಣದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಮಾಡೆಲ್ ಮಹಿಕಾ ಶರ್ಮಾ ಜತೆಯಾಗಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಹಾರ್ದಿಕ್ ಪಾಂಡ್ಯ ಈಗ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಅಧಿಕೃತ ಹೇಳಿಕೆ ನೀಡದಿದ್ದರೂ ಕೂಡ ಮೊದಲ ಬಾರಿಗೆ ಸಾರ್ವಜನಿಕವಾಗಿ ಈ ಜೋಡಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಇವರಿಬ್ಬರು ರಿಲೇಶನ್‌ಶಿಪ್‌ನಲ್ಲಿ ಇರುವುದು ಸದ್ಯಕ್ಕೆ ಖಚಿತವಾದಂತಿದೆ.
2024ರಲ್ಲಿ ನತಾಸಾ ಸ್ಟಾಂಕೋವಿಕ್‌ಗೆ ಪಾಂಡ್ಯ ವಿಚ್ಛೇದನ ನೀಡಿದ ಬಳಿಕ ಹೊಸ ಮಹಿಳಾ ಸಂಗಾತಿಯೊಂದಿಗೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೊಲ್ಲಿ ಮಹಿಕಾ ಶರ್ಮಾ, ಕ್ರಿಕೆಟಿಗನ ಕಾರಿನಲ್ಲಿ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವುದು ಕಂಡುಬಂದಿದೆ. ಈ ಜೋಡಿ ಕಪ್ಪು ಉಡುಪಿನಲ್ಲಿ ಸಂಘಟಿತವಾಗಿ ಕಾಣಿಸಿಕೊಂಡಿದ್ದು, ಟರ್ಮಿನಲ್ ಕಡೆಗೆ ಒಟ್ಟಿಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದ್ದು, ವಿದೇಶಿ ಪ್ರವಾಸ ಕೈಗೊಂಡಂತೆ ಕಾಣಿಸಿದೆ.

ಇತ್ತೀಗೆಷ್ಟೇ ದುಬೈನಲ್ಲಿ ನಡೆದಿದ್ದ ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಪಂದ್ಯದ ವೇಳೆಯೂ ಮಹಿಕಾ ಶರ್ಮಾ ಹಾಜರಿದ್ದರು. ಅಲ್ಲದೆ ಮಹಿಕಾ ಶರ್ಮಾ ಮಾಡಿರುವ ಕೆಲವು ಇನ್‌ಸ್ಟಾಗ್ರಾಮ್‌ ಸ್ಟೋರಿ ಪೋಸ್ಟ್‌ನಲ್ಲಿ ಅವರ ಜತೆ ಹಾರ್ದಿಕ್‌ ಪಾಂಡ್ಯ ಕೂಡ ಇರುವುದು ಬೆಳಕಿಗೆ ಬಂದಿತ್ತು. ಹಾರ್ದಿಕ್ ಮತ್ತು ಮಹಿಕಾ ಒಂದೇ ಬಾತ್‌ರೋಬ್ ಧರಿಸಿರುವುದು ಕಾಣಿಸಿಕೊಂಡಿತ್ತು. ಅದಾಗಲೇ ಪಾಂಡ್ಯ ಮತ್ತು ಮಹಿಕಾ ಡೇಟಿಂಗ್‌ ನಡೆಸುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡಿತ್ತು. ಇದೀಗ ಆತ್ಮೀಯವಾಗಿ ಕಾಣಿಸಿಕೊಂಡದ್ದು ಈ ಜೋಡಿ ಡೇಟಿಂಗ್‌ ನಡೆಸುತ್ತಿದ್ದಾರೆ ಎನ್ನುವುದಕ್ಕೆ ಪುಷ್ಠಿ ನೀಡಿದಂತಾಗಿದೆ.

ಯಾರು ಈ ಮಹಿಕಾ?: ಮಹೀಕಾ ಮಾಡೆಲ್ ಆಗಿದ್ದು, 2024ರ ಭಾರತೀಯ ಫ್ಯಾಷನ್ ಪ್ರಶಸ್ತಿಗಳಲ್ಲಿ ವರ್ಷದ ಮಾಡೆಲ್ (ನವಯುಗ) ಪ್ರಶಸ್ತಿಯನ್ನು ಪಡೆದಿದ್ದಾರೆ. ಮಹೀಕಾ ಹಲವಾರು ವರ್ಷಗಳಿಂದ ಕೆಲ ಸಂಗೀತ ವೀಡಿಯೊಗಳು, ಕಿರುಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೆಚ್ಚಾಗಿ ಬಿಕಿನಿ ಧರಿಸಿದ ಫೋಟೊ ಮತ್ತು ವಿಡಿಯೊಗಳನ್ನು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಮಾಡುತ್ತಿರುತ್ತಾರೆ.

ಮಹೀಕಾ ಅರ್ಥಶಾಸ್ತ್ರ ಮತ್ತು ಹಣಕಾಸಿನಲ್ಲಿ ಪದವಿ ಪಡೆದಿದ್ದಾರೆ. ಆದರೆ ಅವರು ಪೂರ್ಣ ಪ್ರಮಾಣದಲ್ಲಿ ಮಾಡೆಲಿಂಗ್ ಮತ್ತು ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ತನಿಷ್ಕ್, ವಿವೋ ಮತ್ತು ಯುನಿಕ್ಲೋ ನಂತಹ ಬ್ರ್ಯಾಂಡ್‌ಗಳ ಜಾಹೀರಾತು ಪ್ರಚಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!