ಉದಯವಾಹಿನಿ ನವದೆಹಲಿ: ಹಣ್ಣುಗಳು ನಮ್ಮ ಆರೋಗ್ಯಕ್ಕೆ ಬಹಳ ಅಗತ್ಯವಾದದ್ದು. ಜೀವಸತ್ವಗಳು, ಖನಿಜಾಂಶಗಳು ಮತ್ತು ಫೈಬರ್‌ನಿಂದ ಸಮೃದ್ಧವಾಗಿರುವ ಹಣ್ಣುಗಳು ಹೃದಯ ಕಾಯಿಲೆ, ರಕ್ತದಲ್ಲಿನ ಸಕ್ಕರೆ ಅಂಶ ಮತ್ತು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಆದರೆ ಹಣ್ಣುಗಳನ್ನು ಕೇವಲ ‘ತಿನ್ನುವುದು’ ಮಾತ್ರವಲ್ಲ, ಅವುಗಳನ್ನು ಹೇಗೆ, ಯಾವಾಗ ಮತ್ತು ಯಾವುದರೊಂದಿಗೆ ತಿನ್ನುತ್ತೇವೆ ಎಂಬುದು ಕೂಡ ಮುಖ್ಯವಾಗುತ್ತದೆ. ನೀವು ಹಣ್ಣನ್ನು ಹೇಗೆ ಸೇವಿಸುತ್ತೀರಿ, ನೀವು ಅದನ್ನು ಸೇವಿಸುವ ಪ್ರಮಾಣ ಹೀಗೆ ಇವೆಲ್ಲವೂ ನಿಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ. ಹಾಗಾಗಿ ಹಣ್ಣುಗಳನ್ನು ಸೇವಿಸುವಾಗ ನಾವು ಸಾಮಾನ್ಯವಾಗಿ ಮಾಡುವ ತಪ್ಪುಗಳನ್ನು ಯಾವ ರೀತಿ ಸರಿಪಡಿಸಬಹುದು ಎನ್ನುವ ಮಾಹಿತಿ ಇಲ್ಲಿದೆ.
ಸಂಪೂರ್ಣ ಹಣ್ಣನ್ನು ತಿನ್ನದೆ ಹಣ್ಣಿನ ರಸವನ್ನುಆರಿಸುವುದು: ಹಣ್ಣಿನ ಜ್ಯೂಸ್ ತಯಾರಿಸುವಾಗ ಫೈಬರ್ ಅಂಶವು ಹೊರಹೋಗುತ್ತದೆ. ಫೈಬರ್ ಇಲ್ಲದ ಕಾರಣ ಸಕ್ಕರೆಯು ನೇರವಾಗಿ ರಕ್ತಕ್ಕೆ ಹೋಗಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ. ಇಡೀ ಹಣ್ಣು ತಿನ್ನುವಾಗ ಸಿಗುವ ಫೈಬರ್ ಅಂಶಗಳು ಜ್ಯೂಸ್‌ನಿಂದ ಸಿಗುವುದಿಲ್ಲ.
ಊಟದ ನಂತರ ಸಿಹಿತಿಂಡಿಯಾಗಿ ಹಣ್ಣು ತಿನ್ನುವುದು: ಹೆಚ್ಚಿನವರು ಊಟ ಮಾಡಿದ ತಕ್ಷಣ ಹಣ್ಣು ತಿನ್ನುತ್ತಾರೆ. ಇದು ಗ್ಲೈಸೆಮಿಕ್ ಪರಿಣಾಮದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಜೀರ್ಣಕ್ರಿಯೆಗೆ ಕೂಡ ತೊಂದರೆಯಾಗಬಹುದು. ಹೀಗಾಗಿಹಿ ಹಣ್ಣುಗಳನ್ನು ಊಟಕ್ಕೆ 20-30 ನಿಮಿಷಗಳ ಮೊದಲು ಸೇವಿಸಿ.
ಒಣ ಹಣ್ಣುಗಳನ್ನು ಅತಿಯಾಗಿ ತಿನ್ನುವುದು: ಒಣ ಹಣ್ಣುಗಳಲ್ಲಿ ನೀರಿನಾಂಶ ಇರುವುದಿಲ್ಲ. ಹಾಗಾಗಿ ಅವುಗಳಲ್ಲಿ ಕ್ಯಾಲೋರಿ ಸಾಂದ್ರತೆ ಹೆಚ್ಚಿರುತ್ತವೆ ಮತ್ತು ಅವುಗಳನ್ನು ಸುಲಭವಾಗಿ ಹೆಚ್ಚು ತಿನ್ನುತ್ತಾರೆ. ಹಾಗಾಗಿ ಒಣ ಹಣ್ಣುಗಳನ್ನು ಕೇವಲ ಅಲಂಕಾರಿಕವಾಗಿ ಅಥವಾ ರುಚಿಗಾಗಿ ಸಣ್ಣ ಪ್ರಮಾಣದಲ್ಲಿ ಬಳಸಿ.

Leave a Reply

Your email address will not be published. Required fields are marked *

error: Content is protected !!