ಉದಯವಾಹಿನಿ, ಪಾಟ್ನಾ: ಮತದಾರರ ಪಟ್ಟಿಯಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದ್ದ ಬಿಹಾರದ ಧೋರೈಯಾ ಬ್ಲಾಕ್‌ನ ಬಟ್ಸರ್ ಗ್ರಾಮದ ಐವರು ಮತದಾರರು ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.ಬೂತ್ ಸಂಖ್ಯೆ 216ರ ಐವರು ಗ್ರಾಮಸ್ಥರು ಬಿಡಿಒ ಅರವಿಂದ್ ಕುಮಾರ್ ಅವರನ್ನು ಸಂಪರ್ಕಿಸಿ ʻನಾವು ಜೀವಂತವಾಗಿದ್ದೇವೆʼ ಎಂದು ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ಬಿಹಾರ ಮೊದಲ ಹಂತದ ಚುನಾವಣೆ ಸಮಿಸುತ್ತಿರುವಾಗ ಈ ಬೆಳವಣಿಗೆ ನಡೆದಿದೆ. ಮತದಾರರಾದ ಮೋಹನ್ ಸಾ (ಸೀರಿಯಲ್ ಸಂಖ್ಯೆ 2), ಸಂಜಯ್ ಯಾದವ್ (ಸೀರಿಯಲ್ ಸಂಖ್ಯೆ 175), ರಾಮರೂಪ್ ಯಾದವ್ (ಸೀರಿಯಲ್ ಸಂಖ್ಯೆ 211), ನರೇಂದ್ರ ಕುಮಾರ್ ದಾಸ್ (ಸೀರಿಯಲ್ ಸಂಖ್ಯೆ 364), ಮತ್ತು ವಿಶ್ವವರ್ ಪ್ರಸಾದ್ (ಸೀರಿಯಲ್ ಸಂಖ್ಯೆ 380) ಇವರನ್ನು ಮತದಾರರ ಪಟ್ಟಿಯಲ್ಲಿ ಮೃತಪಟ್ಟಿದ್ದಾರೆ ಎಂದು ನಮೋದಿಸಲಾಗಿತ್ತು.
ಸಾಮಾಜಿಕ ಕಾರ್ಯಕರ್ತ ಇಂದ್ರದೇವ್ ಮಂಡಲ್ ನೇತೃತ್ವದಲ್ಲಿ, ಈ ಐವರು ಮತದಾರರ ಪಟ್ಟಿಯ ದೋಷವನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ದೋಷವು ನಮ್ಮ ಮತ ಚಲಾಯಿಸುವ ಹಕ್ಕನ್ನು ತಡೆಯಬಹುದು ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ. ಬಿಡಿಒ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ, ಬಿಎಲ್‌ಒಗೆ ದೋಷ ಸರಿಪಡಿಸುವಂತೆ ಸೂಚಿಸಿದರು. ಇದೇ ವೇಳೆ ಯಾವುದೇ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *

error: Content is protected !!